ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಟರ್ ಮುರಿದು ಅಂಗಡಿಗೆ ಕನ್ನ ಹಾಕಿದ್ದ ಖದೀಮ ಅರೆಸ್ಟ್

ಹುಬ್ಬಳ್ಳಿ: ನಗರದ ನೀಲಿಜನ್ ರಸ್ತೆಯ ಅಜಂತಾ ಏಜನ್ಸಿ ಅಂಗಡಿಯ ಶಟರ್ ಮುರಿದು 97 ಸಾವಿರ ಮೌಲ್ಯದ ಉಪಕರಣಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಉಪನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾತ್ರಿ ಸಮಯದಲ್ಲಿ ಶಟರ್ಸ್ ಮುರಿದು ಅಂಗಡಿ ಒಳಗೆ ಪ್ರವೇಶಿಸಿ ಲ್ಯಾಪ್ ಟಾಪ್ ಸೇರಿದಂತೆ ಪ್ಲಬಿಂಗ್ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ಪೊಲೀಸ್ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರ ಬಿ.ಡಿ ಅವರ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನಿಂದ 5,500 ರೂ ಹಣ, 4500 ರೂ. ಮೌಲ್ಯದ ಹೆಚ್.ಪಿ ವಾಟರ ಪಂಪ್, 22 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಸೇರಿದಂತೆ ಒಟ್ಟು 97 ಸಾವಿರ ರೂ. ಮೌಲ್ಯದ ಉಪಕರಣ ವಶಪಡಿಸಿಕೊಂಡಿದ್ದಾರೆ. ಆರೋಪಿ ನಾಯ್ಯಾಂಗ ಬಂಧನದಲ್ಲಿದ್ದು, ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/05/2022 08:35 am

Cinque Terre

22.93 K

Cinque Terre

1

ಸಂಬಂಧಿತ ಸುದ್ದಿ