ಧಾರವಾಡ:ತಾಲೂಕಿನ ಕವಲಗೇರಿ ಗ್ರಾಮದ ಹದ್ದಿನಲ್ಲಿ ಬರುವ ಹೊಲದ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಹಾಡಹಗಲೇ ಕೊಲೆ ಮಾಡಲಾಗಿದೆ.
ಅಮ್ಮಿನಬಾವಿ ಗ್ರಾಮದ ಪ್ರಕಾಶ ದೇಶದ ಎಂಬುವವರೇ ಹತ್ಯೆಗೀಡಾದವರು.
ಅಮ್ಮಿನಬಾವಿ ಗ್ರಾಮದಿಂದ ಪ್ರಕಾಶ ಅವರು ಬೈಕ್ ತೆಗೆದುಕೊಂಡು ಬರುತ್ತಿದ್ದ ವೇಳೆ ಎರಡ್ಮೂರು ಜನ ಸೇರಿಕೊಂಡು ದಾಳಿ ನಡೆಸಲಾಗಿದೆ. ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಡಿಎಸ್‌ಪಿ ಸಂಕದ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹತ್ಯೆ ಮಾಡಿದವರು ಯಾರು ಹಾಗೂ ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
10/05/2022 03:42 pm