ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ ಹಾಗಿದ್ದರೆ ಹುಷಾರ್!

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕಲು ಹೋಗಿ ಧಾರವಾಡ ಯಾಲಕ್ಕಿ ಶೇಟ್ಟರ ಕಾಲೋನಿ ಮಯೂರ ಪಾರ್ಕ್ ನಿವಾಸಿ ಸುಹಾಸಿನಿ ಶಿಗ್ಗಾವಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ 87,791 ರೂ. ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸುಹಾಸಿನಿಯವರು ಉದ್ಯೋಗ ಹುಡಕಲು ಲಿಂಕ್ ಡಿನ್ ಆ್ಯಪ್‌ನಲ್ಲಿ ತನ್ನ ಎಲ್ಲ ಸ್ವವಿವರ ದಾಖಲಿಸಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ ಮನಿ ಮೇಕಿಂಗ್ ಲಿಂಕ್ ಕಳುಹಿಸಿದ್ದಾನೆ. ಅದನ್ನು ನಂತರ ಅವರು ಓಪನ್ ಮಾಡಿದ್ದಾರೆ. ಕರೆ ಮಾಡಿ ನೀವು ಹಲವು ವಸ್ತುಗಳನ್ನು ಖರೀದಿಸಬೇಕು ಎಂದು 780 ರೂ. ವರ್ಗಾಯಿಸಿಕೊಂಡು ಅವರ ಖಾತೆಗೆ 988 ರೂ. ಹಾಕಿದ್ದಾನೆ. ಇದಾದ ಬಳಿಕ ಆ ವ್ಯಕ್ತಿ ಹಂತ ಹಂತವಾಗಿ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

29/04/2022 10:55 pm

Cinque Terre

24.23 K

Cinque Terre

0

ಸಂಬಂಧಿತ ಸುದ್ದಿ