ಕುಂದಗೋಳ : ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲು ಸಾರಾಯಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುಂದಗೋಳ ಅಬಕಾರಿ ಪೊಲೀಸರು ಇನಾಮಕೊಪ್ಪ ಕ್ರಾಸ್ ಬಳಿ ಮಂಗಳವಾರ ಬಂಧಿಸಿದ್ದಾರೆ. ಕುಂದಗೋಳ ತಾಲೂಕಿನ ಇನಾಮಕೊಪ್ಪ ಗ್ರಾಮದ ಯಲ್ಲಪ್ಪ ದುರ್ಗಪ್ಪ ಮಾದರ ಎಂಬಾತ ಅಕ್ರಮವಾಗಿ 90 ಮಿ.ಲೀ ಲೀಟರ್ 96 ಒರಿಜಿನಲ್ ಚಾಯ್ಸ್ ವಿಸ್ಕಿ ಪೆಟ್'ಗಳನ್ನು ಅಕ್ರಮ ಮಾರಾಟಕ್ಕಾಗಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ 3500 ರೂಪಾಯಿ ಮೌಲ್ಯದ ಸಾರಾಯಿ ಪಾಕೆಟ್ ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ಇನ್ಸಪೆಕ್ಟರ್ ಪ್ರೇಮಸಿಂಗ್ ಲಮಾಣಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಕುಂಬಾರ, ಜಗದೀಶ್ ಅವಾರಿ, ರಮೇಶ್ ಪಡಕೆ ಭಾಗವಹಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Kshetra Samachara
28/04/2022 10:42 am