ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಅಭಿಷೇಕ ಹಿರೇಮಠ ಸ್ಪೋಟಕ ಹೇಳಿಕೆ;ವೀಡಿಯೋ ಎಡಿಟ್ ಮಾಡಿದ ಯುವಕನ ವಿಚಾರಣೆ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಳೆ ಹುಬ್ಬಳ್ಳಿಯ ಗಲಭೆಯ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ವೀಡಿಯೋ ಎಡಿಟ್ ಮಾಡಿ ಹಾಕಿರುವ ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಆನಂದನಗರ ಬಡಾವಣೆಯ ವೀರಭದ್ರಗೌಡ ಪಾಟೀಲ್ ಅಸಲಿ ಆಸಾಮಿ ಆಗಿದ್ದು, ವೀರಭದ್ರಗೌಡ ಪಾಟೀಲ್ ಎಡಿಟ್ ಮಾಡಿ ಹಾಕಿದ್ದ ಪೋಸ್ಟ್ ಅನ್ನ ಅಭಿಷೇಕ ಸ್ಟೇಟಸ್ ಇಟ್ಗೊಂಡಿದ್ದ. ವಿವಾದದ ವಾಸನೆ ಬರುತ್ತಿದ್ದಂತೆ ಪೋಸ್ಟ್ ತೆಗೆದುಹಾಕಿದ್ದ. ಆದರೆ ವಿಷಯದ ಗಂಭೀರತೆ ಅರಿಯದ ಅಭಿಷೇಕ್ ಪೋಸ್ಟ್ ತೆಗೆದಿರಲಿಲ್ಲ. ಅಭಿಷೇಕ ಹೇಳಿಕೆಯ ಮೇಲೆ ವೀರಭದ್ರ ಗೌಡನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಗೌಪ್ಯವಾಗಿಯೇ ವೀರಭದ್ರಗೌಡನ ವಿಚಾರಣೆ ನಡೆದಿದ್ದು, ವೀರಭದ್ರಗೌಡನ ಜತೆಗೆ ಆತನ ಇನ್ನೊಬ್ಬ ಸ್ನೇಹಿತನೂ ಇದರಲ್ಲಿ ಭಾಗಿಯಾಗಿರುವುದು ಅಭಿಷೇಕ ಹೇಳಿಕೆ‌ ಮೂಲಕ ತಿಳಿದು ಬಂದಿದೆ. ಆತನ‌ ಪತ್ತೆಗೆ ಜಾಲ ಬೀಸಿದ್ದು, ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/04/2022 11:45 am

Cinque Terre

140.63 K

Cinque Terre

27

ಸಂಬಂಧಿತ ಸುದ್ದಿ