ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಗೆದಷ್ಟು ಬಯಲಾಗುತ್ತಿದೆ ಕಲ್ಲು ತೂರಾಟ ಪ್ರಕರಣ: ಪೊಲೀಸ್ ಕಮಿಷನರೇಟ್ ಹೈ ಅಲರ್ಟ್

ಹುಬ್ಬಳ್ಳಿ: ಅದು ಮೊನ್ನೆಯಷ್ಟೇ ನಡೆದ ಕಲ್ಲು ತೂರಾಟದ ಪ್ರಕರಣ. ಈ ಪ್ರಕರಣದಲ್ಲಿ ಬಗೆದಷ್ಟು ಬಯಲಾಗುತ್ತಿವೆ ಗಲಾಟೆಯ ಆಕ್ರೋಶದ ಚಿತ್ರಣಗಳು. ಏಕಾಏಕಿ ನಡೆದ ಗಲಾಟೆಯಲ್ಲಿ ಇಷ್ಟೊಂದು ಕ್ರೌರ್ಯ ಸೃಷ್ಟಿಯಾಗಲು ಸಾಧ್ಯವೇ ಎಂಬ ಅನುಮಾನ ಕಾಡುತ್ತಿದೆ. ಇದು ಪೂರ್ವನಿಯೋಜಿತ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಘಟನೆಯ ಮತ್ತಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ...

ಶನಿವಾರ ರಾತ್ರಿ ನಡೆದ ಕೋಮುಗಲಭೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 15 ಜನರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ ಒಟ್ಟು 104 ಆಗಿದೆ. ಗಲಭೆ ಮಾಡಿದ್ದವರಲ್ಲಿ ಮತ್ತೆ 15 ಜನರ ಬಂಧಿಸಿದ ಬೆನ್ನಲ್ಲೇ ಮತ್ತೇ 5 ಎಫ್ಐಆರ್ ದಾಖಲಿಸಲಾಗಿದ್ದು, ಇದುವರೆಗೂ ಒಟ್ಟು 12 ಎಫ್ಐಆರ್ ದಾಖಲಾಗಿವೆ. ದೇವಸ್ಥಾನ, ಮನೆ ಹಾಗೂ ಪೋಸ್ಟ ಆಫೀಸ್ ಮೇಲೆ ಕಲ್ಲು ಎಸೆದಿರುವ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿದೆ.

ಇನ್ನು ಹುಬ್ಬಳ್ಳಿಯ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಮುಂದುವರೆಸಿದ ಪೊಲೀಸರು ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮ ಜರುಗಿಸಿದ್ದಾರೆ. ಪೊಲೀಸ್ ವಾಹನದ ಮೇಲೆ ಮೌಲ್ವಿ ಸೇರಿದಂತೆ ಹಲವರು ಹತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ಕೂಡಲೇ ಹೆಡೆಮುರಿ ಕಟ್ಟಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರು ತನಿಖೆ ನಂತರ ಎಲ್ಲ ಸತ್ಯಾಸತ್ಯತೆ ಗೊತ್ತಾಗಲಿದೆ ಎನ್ನುತ್ತಾರೆ.

ಒಟ್ಟಿನಲ್ಲಿ ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ರು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅವರನ್ನು ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಸಿದ್ಧವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/04/2022 12:16 pm

Cinque Terre

109.24 K

Cinque Terre

12

ಸಂಬಂಧಿತ ಸುದ್ದಿ