ಹುಬ್ಬಳ್ಳಿ: ಆಕ್ಷೇಪಾರ್ಹ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಠಾಣೆಯ ಎದುರು ಜನ ಸೇರಿದ್ದರು. ಎಲ್ಲರಿಗೂ ಮನೆಗೆ ತೆರಳುವಂತೆ ಹೇಳಿದ್ದರೂ ಕೆಳದೆ ಗಲಾಟೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ 40ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಘಟನೆ ಕುರಿತು ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತ ಲಾಭುರಾಮ್ ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾತನಾಡಿದ ಅವರು, ಸದ್ಯ 4 ಪ್ರಕರಣ ದಾಖಲಾಗಿದೆ. ಮುಸಲ್ಮಾನ ಕಮಿಟಿಯವರು ಹೇಳಿದರೂ ಅವರು ಕೇಳಿಲ್ಲ ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ದಾರೆ. ಸದ್ಯ ನಾವೇ ಯುವಕರನ್ನು ಚದುರಿಸಿದ್ದೇವೆ. ಪೋಸ್ಟ ಮಾಡಿದ ಯುವಕನ ಮೇಲೆ ಪ್ರಕರಣ ದಾಖಲಾದರೂ ದಾಂಧಲೆ ಮಾಡಿದ್ದಾರೆ. ಈಗಾಗಲೆ 40 ಜನರನ್ನು ಅರೆಸ್ಟ ಮಾಡಲಾಗಿದೆ. ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದೆ ಎಂದರು.
ಗಲಾಟೆಯಲ್ಲಿ 12 ಜನ ಪೋಲಿಸರು ಗಾಯಗೊಂಡಿದ್ದಾರೆ. 7 ವಾಹನಗಳು ಜಖಂ ಆಗಿವೆ. ಖಾಸಗಿ ಜನರಿಗೆ ಯಾವುದೇ ಹಾನಿಯಾಗಿದ್ದರೇ ದೂರು ದಾಖಲಿಸಿಲಿ ಎಂದು ಸಾರ್ವಜನಿಕರಿಗೆ ಕಮಿಷನರ್ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 11:38 am