ಹುಬ್ಬಳ್ಳಿ: ವಿವಿಧ ಜಾಬ್ ಪೋರ್ಟಲ್ ಗಳಲ್ಲಿ ಕೆಲಸಕ್ಕಾಗಿ ನೋಂದಾಯಿಸಿದ್ದ ವಿದ್ಯಾರ್ಥಿಯೊಬ್ಬನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆತನಿಂದ 17,698 ರೂ. ಪಡೆದು ವಂಚಿಸಿರುವ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗೇರಿಯ ಪ್ರವೀಣ ಎಂಬಾತ ಕೆಲಸ ಹುಡುಕಿ ಕೆಲ ಜಾಬ್ ಪೋರ್ಟಲ್ ಗಳಲ್ಲಿ ಹೆಸರು ನೋಂದಾಯಿಸಿದ್ದರು. ಈ ಬಗ್ಗೆ ಹೇಗೋ ಮಾಹಿತಿ ಪಡೆದ ಮಹಿಳೆಯೊಬ್ಬಳು ಕರೆ ಮಾಡಿ ತನ್ನ ಹೆಸರು ಶ್ರುತಿ ಜೈನ, ತಾನು ಕಂಪನಿಯೊಂದರ ಮಾನವ ಸಂಪನ್ಮೂಲಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ನಿಮಗೆ ಕೆಲಸ ಬೇಕಾದರೆ 10 ದಿನದ ಕೋರ್ಸ್ ಒಂದನ್ನು ಮಾಡಬೇಕು ಎಂದು ನಂಬಿಸಿ ಹಣ ಪಡೆದು ವಂಚಿಸಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kshetra Samachara
15/04/2022 09:49 am