ಹುಬ್ಬಳ್ಳಿ: ಕೇಶ್ವಾಪೂರ ಕುಸುಗಲ್ಲ ರಸ್ತೆಯಲ್ಲಿ ಹಾಗೂ ವಿದ್ಯಾನಗರದಲ್ಲಿ ಪ್ರತ್ಯೇಕವಾಗಿ ಔಷಧ ಅಂಗಡಿಗಳ ಶಟರ್ಸ್ ಮುರಿದು ನಗದು ಹಾಗೂ ಸಿಸಿಟಿವಿಗೆ ಅಳವಡಿಸಿದ್ದ ಡಿವಿಆರ್ ಕಳ್ಳತನವಾಗಿದೆ.
ಹೌದು ಕುಸುಗಲ್ ರಸ್ತೆಯ ಅಕ್ಷಯ ಎನಕ್ಷೇವ್ ಅಪಾರ್ಟ್ ಮೆಂಟ್ ನ ನೆಲಮಹಡಿಯಲ್ಲಿನ ಅಲೋಕ ಕುಮಾರ ಎಂಬುವರ ಔಷಧ ಅಂಗಡಿ ಶಟರ್ಸ್ ಮುರಿದ ಕಳ್ಳರು 15 ಸಾವಿರ ನಗದು, ಎಟಿಎಂ ಕಾರ್ಡ್, ಸಿಸಿಟಿವಿ ಡಿವಿಆರ್ ಎಗರಿಸಿದ್ದಾರೆ.
ಅದೇ ರೀತಿ ವಿದ್ಯಾನಗರದ ವೈಭವ ಹೊಟೇಲ್ ಹತ್ತಿರದ ಆಕಾಶ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ನ ಶಟರ್ಸ್ ಮುರಿದು, ನಗದು ಕಳ್ಳತನ ಮಾಡಿದ್ದಾರೆ. ಈ ಕುರಿತು ಕೇಶ್ವಾಪೂರ ಹಾಗೂ ವಿದ್ಯಾನಗರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Kshetra Samachara
12/04/2022 11:34 am