ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಹತ್ತು ಜನ: 16,79 ಲಕ್ಷ ವಂಚನೆ ದೂರು ದಾಖಲು

ಹುಬ್ಬಳ್ಳಿ: ಅಪರಿಚಿತ ಮಹಿಳೆಯೊಬ್ಬಳ ಹೂಡಿಕೆ ವ್ಯವಹಾರದ ಆಮಿಷದ ಬಲೆಗೆ ಬಿದ್ದ ಹತ್ತು ಮಂದಿ, ಲಾಭದ ಆಸೆಗಾಗಿ 16,79 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ಕೇಶ್ವಾಪುರದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಮಹಿಳೆ, ಮೊಬೈಲ್ ಟವರ್ ಅಳವಡಿಕೆಯ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಲಾಭ ಪಡೆಯಬಹುದು. ಜೊತೆಗೆ, ನಿಮ್ಮ ಸ್ನೇಹಿತರಿಂದಲೂ ಹೂಡಿಕೆ ಮಾಡಿಸಿದರೆ, ಹೆಚ್ಚು ಲಾಭ ಸಿಗುತ್ತದೆ ಎಂದು ಆಮಿಷ ತೋರಿಸಿದ್ದಾಳೆ. ಜೊತೆಗೆ, ಕಂಪನಿಯ ವ್ಯವಸ್ಥಾಪಕಿಯ ಮೊಬೈಲ್ ಸಂಖ್ಯೆ ಜೊತೆಗೆ, ಹೂಡಿಕೆಗೆ ಸಂಬಂಧಿಸಿದ ಲಿಂಕ್ ಕೂಡ ಶೇರ್ ಮಾಡಿದ್ದಾಳೆ.

ವ್ಯವಸ್ಥಾಪಕಿ ಜೊತೆ ಚಾಟ್ ಮಾಡಿದಾಗ, ಆಕೆಯೂ ಲಾಭದ ಆಮಿಷ ತೋರಿಸಿ ನಂಬಿಸಿದ್ದಾಳೆ. ನಂತರ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 3.62 ಲಕ್ಷ, ಆತನ ಪತ್ನಿಯ ಖಾತೆಯಿಂದ 1.37 ಹಾಗೂ ಅವರ ಎಂಟು ಸ್ನೇಹಿತರಿಂದಲೂ ಹೂಡಿಕೆ ಹೆಸರಿನಲ್ಲಿ ಒಟ್ಟು 16,79 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

04/04/2022 11:45 am

Cinque Terre

19.88 K

Cinque Terre

1

ಸಂಬಂಧಿತ ಸುದ್ದಿ