ಹುಬ್ಬಳ್ಳಿ: ನಗರದ ಬಸವ ವೃತ್ತದ ಹತ್ತಿರವಿರುವ ಕಾರ್ಪೋರೆಶನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಅಪರಿಚಿತರು ಹಣ ತೆಗದುಕೊಡುವ ನೆಪ ಮಾಡಿ, ಬಳಿಕ ಅವರ ಖಾತೆಯಿಂದ 31,500 ರೂ. ವಂಚಿಸಿರುವ ಪ್ರಕರಣ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಳೆ ಹುಬ್ಬಳ್ಳಿ ಅರವಿಂದ ನಗರದ ನಿವಾಸಿ ಸಂಗೀತಾ ಕಾಠಾರೆ ಎಂಬುವರ ಮಗ ಹಣ ತೆಗೆದುಕೊಳ್ಳಲು ಎಟಿಎಂ ಗೆ ಹೋಗಿದ್ದಾನೆ. ಆ ಸಮಯದಲ್ಲಿ ಅಪರಿಚಿತರು ಸಹಾಯ ಮಾಡುವುದಾಗಿ ಹೇಳಿ ಅವರ ಎಟಿಎಂ ಸಂಖ್ಯೆ ತೆಗೆದುಕೊಂಡಿದ್ದಾರೆ.
ನಂತರ ಅವನು ಹೋದ ಬಳಿಕ ಬೇರೊಂದು ಎಟಿಎಂ ಉಪಯೋಗಿಸಿ ಇವರ ಬ್ಯಾಂಕ್ ಖಾತೆಯಿಂದ ಹಣ ತೆಗೆದುಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
04/04/2022 09:09 am