ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಗುಡ್ಡದ ಮಣ್ಣು ಗಣಿಗಾರಿಕೆ?: ಸ್ಥಳೀಯರ ಆರೋಪ

ನವಲಗುಂದ: ನವಲಗುಂದ ಪಟ್ಟಣದ ಮಂಜುನಾಥ ನಗರದಲ್ಲಿನ ಹಿರೇಮಠಕ್ಕೆ ಸೇರಿದ ಸ್ಥಳದಲ್ಲಿನ ಮಣ್ಣನ್ನು ಕಳೆದ ಮೂರು ದಿನಗಳಿಂದ ಬೃಹತ್ ಟಿಪ್ಪರ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಮತ್ತು ಈ ಟಿಪ್ಪರ್‌ಗಳ ಸಂಚಾರದಿಂದ ಮನೆಗಳಿಗೆ ಹಾನಿಯಾಗುತ್ತಿದೆ ಹಾಗೂ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂಬ ಆರೋಪ ಈಗ ದಟ್ಟವಾಗಿ ಕೇಳಿ ಬರುತ್ತಿದೆ.

ಎಸ್...ನವಲಗುಂದದ ಹಿರೇಮಠಕ್ಕೆ ಸೇರಿದ ಸ್ಥಳದಲ್ಲಿನ ಮಣ್ಣನ್ನು ಪುರಸಭೆ ಅಥವಾ ಗಣಿ ಮತ್ತು ಭೂ ಇಲಾಖೆಯ ಪರವಾನಿಗೆ ಪಡೆಯದೇ ತೆಗೆದು ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಪುರಸಭೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಿಬ್ಬಂದಿಗಳನ್ನು ಕಳುಹಿಸಿದ‌ ಪುರಸಭೆ ಅಧಿಕಾರಿಗಳು ಬುಧವಾರ ಮಣ್ಣು ಅಗೆಯುವ ಕೆಲಸ ನಿಲ್ಲಿಸಿದ್ದಾರೆ.

ಇನ್ನು ಹಿರೇಮಠಕ್ಕೆ ಸಂಬಂಧಿಸಿದವರಿಗೆ ಕೇಳಿದರೆ ನಾವು ಕೇವಲ ಮಣ್ಣನ್ನು ಹದ ಮಾಡಿಕೊಳ್ಳುತ್ತಿದ್ದೆವು ಎನ್ನುತ್ತಾರೆ. ಆದರೆ ಹದ ಮಾಡುವುದಾದರೆ ಮೂರು ದಿನಗಳ ಕಾಲ ಟಿಪ್ಪರ್‌ಗಳಿಂದಲೇ ಮಣ್ಣನ್ನು ಬೇರೆಡೆ ಏಕೆ ಸಾಗಿಸಬೇಕಿತ್ತು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಮಹಾಸ್ವಾಮಿಗಳು, ನಮ್ಮ ಹಿರೇಮಠದ ಸ್ಥಳದಲ್ಲಿ ಕಾಪೌಂಡ್ ನಿರ್ಮಿಸುವ ಸಲುವಾಗಿ ನಾವು ಮಣ್ಣನ್ನು ಅಗೆಯುತ್ತಿದ್ದೆವು. ಯಾವ ಅಕ್ರಮವು ನಡೆದಿಲ್ಲ. ಇನ್ನು ಮಣ್ಣನ್ನು ಮಠಕ್ಕಾಗಿ ಬಳಸಲಾಗಿದೆ. ಪರವಾನಿಗೆ ಪಡೆಯುವ ಬಗ್ಗೆ ನಮಗೆ ತಿಳಿದಿರಲಿಲ್ಲ. ಈಗ ಪುರಸಭೆ ವತಿಯಿಂದ ಪರವಾನಿಗೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

01/04/2022 08:09 pm

Cinque Terre

28.98 K

Cinque Terre

0

ಸಂಬಂಧಿತ ಸುದ್ದಿ