ಹುಬ್ಬಳ್ಳಿ : ಕುಡಿದು ಮಲಗಿದ್ದ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಮೊಬೈಲ್ ಕಳ್ಳನನ್ನು ಉಪನಗರ ಠಾಣೆಯ ಪೊಲೀಸರೊಬ್ಬರು ಚೇಸ್ ಮಾಡಿ ಹಿಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಏರಿಬೇಲೇರಿ ಗ್ರಾಮದ ಹುಲ್ಲೇಶ್ ಕಳತನ ಮಾಡಿದ ಆರೋಪಿಯಾಗಿದ್ದು, ಈತ ಇಂದು ಸಂಜೆ ಈದ್ಗಾ ಮೈದಾನ ಬಳಿಯ ಫುಟ್ ಪಾತ್ ಮೇಲೆ ಮದ್ಯ ಸೇವಿಸಿ ಮಲಗಿದ್ದ ಅಪರಿಚಿತ ವ್ಯಕ್ತಿಯ ಕಿಸೆಯಿಂದ ಮೊಬೈಲ್ ಕಳತನ ಮಾಡಿ ಪರಾರಿಯಾಗಲು ಮುಂದಾಗಿದ್ದನು.
ಈ ವೇಳೆ ಕೂಗಳತೆ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನಗರ ಠಾಣೆಯ ಸಿಬ್ಬಂದಿ ಮಾಲತೇಶ ಕಳ್ಳತನವನ್ನು ಗಮನಿಸಿ ಕಳ್ಳನನ್ನು ಬೆನ್ನಟ್ಟಿ ನಿಲಿಜನ್ ರಸ್ತೆಯಲ್ಲಿ ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಇನ್ನೂ ಪೊಲೀಸ್ ಸಿಬ್ಬಂದಿ ಮಾಲತೇಶ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
23/03/2022 08:07 pm