ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪಾರ್ಕಿಂಗ್ ವಿಷಯಕ್ಕೆ ಗಲಾಟೆ: ಉಣಕಲ್ ಬಳಿ ಪರಸ್ಪರ ಹೊಡೆದಾಟ

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಉಣಕಲ್ ಹತ್ತಿರ ನಡೆದಿದೆ.

ಕಳೆದ ಕೆಲ ದಿನಗಳಿಂದ ಉಣಕಲ್ ಭಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನ ನಿತ್ಯವೂ ಹೊಡೆದಾಡುವ ಪ್ರಸಂಗಗಳು ಗೋಚರಿಸುತ್ತಿವೆ. ಅದೇ ರೀತಿ ಇಂದು ಕೂಡಾ ಗಲಾಟೆ ನಡೆದಿರುವುದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪಬ್ಲಿಕ್ ನೆಕ್ಸ್ಟ್ ಗೆ ನೀಡಿದ್ದಾರೆ.

ಸಾರ್ವಜನಿಕರೊಬ್ಬರು ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿ ಹೋಟೆಲ್ ಗೆ ಹೋಗಿದ್ದಾರೆ. ಆದರೆ ಮನೆಯವರು ಕಾರಿನ ಗ್ಲಾಸ್ ಒಡೆದು ಕಾರ್ ಚಾಲಕನಿಗೆ ಹೊಡೆದಿದ್ದಾರೆ. ಬಳಿಕ ಕಾರ್ ಚಾಲಕ ಪುನಃ ತನ್ನ ಕುಟುಂಬದ ಜೊತೆಗೆ ಬಂದು ಜಗಳ ತಗೆದಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿದ ಬಳಿಕವೇ ಘಟನೆಯ ಸತ್ಯಾಸತ್ಯತೆ ಗೊತ್ತಾಗಬೇಕಿದೆ.

Edited By : Nagesh Gaonkar
Kshetra Samachara

Kshetra Samachara

10/03/2022 08:51 pm

Cinque Terre

58.7 K

Cinque Terre

9

ಸಂಬಂಧಿತ ಸುದ್ದಿ