ಹುಬ್ಬಳ್ಳಿ: ಚಿನ್ನಾಭರಣ ಮಾಡುವ ಸಲುವಾಗಿ ಚಿನ್ನದ ಅಂಗಡಿ ಮಾಲೀಕ ನೀಡಿದ್ದ 5.5 ಲಕ್ಷ ರೂ. ಮೌಲ್ಯದ 108 ಗ್ರಾಂ ಚಿನ್ನದ ಸಮೇತ ಕೆಲಸಗಾರರು ಪರಾರಿಯಾಗಿರುವ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳ ಮೂಲದ ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಚಿನ್ನದೊಂದಿಗೆ ಪರಾರಿಯಾದ ಕೆಲಸಗಾರರು. ಇಲ್ಲಿನ ಶಾ ಬಜಾರ್, ಗೌಳಿ ಗಲ್ಲಿಯ ಮಿರಜುಲ್ ಸೈಯದಲಿ ಮಂಡಲ ಚಿನ್ನದಂಗಡಿ ಮಾಲೀಕ. ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಅವರು ಅಂಗಡಿಯ ಮಾಲೀಕ ಕೊಡುತ್ತಿದ್ದ ಗಟ್ಟಿ ಚಿನ್ನವನ್ನು ಪಡೆದು ಆಭರಣ ಮಾಡಿಕೊಡುತ್ತಿದ್ದರು.
ಡಿ.15 ರಂದು ರತನ್‌ಗೆ 55 ಗ್ರಾಂ ಹಾಗೂ ನಾಸೀರ್‌ಗೆ 53 ಗ್ರಾಂ ಚಿನ್ನದ ಗಟ್ಟಿ ಕೊಟ್ಟಿದ್ದರು. ಇಬ್ಬರೂ ಆಭರಣ ಮಾಡಿಕೊಡದೇ ನಾಪತ್ತೆಯಾಗುವ ಮೂಲಕ ವಂಚಿಸಿದ್ದಾರೆ ಎಂದು ಸೈಯದಲ್ಲಿ ದೂರಿನಲ್ಲಿ ಆರೋಪಿಸಿದ್ದಾರೆ. ತನಿಖೆ ಮುಂದುವರೆದಿದೆ.
Kshetra Samachara
23/02/2022 11:46 am