ಹುಬ್ಬಳ್ಳಿ: ಹವಾಲ್ದಾರ್‌ನೋರ್ವ ತನ್ನದೇ ಠಾಣೆಯ ಕಾನ್ಸ್‌ಟೇಬಲ್‌ಗೆ ಹೆಲ್ಮೆಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
ಯಾದಗಿರಿ ಮೂಲದ ಸಿದ್ದಪ್ಪ ಹಲ್ಲೆಗೆ ಒಳಗಾದ ಕಾನ್‌ಸ್ಟೇಬಲ್. ಸಿದ್ದಪ್ಪ ಅವರಿಗೆ ಬೀಟ್ ಡ್ಯೂಟಿ ನೀಡಲಾಗಿತ್ತು. ಈ ಸಮಯದಲ್ಲಿ ಎಸ್‌ಎಚ್‌ಓ ಆಗಿದ್ದ ಪ್ರಕಾಶ ಗೋವಿಂದಪ್ಪ ಅವರು ತಡವಾಗಿ ಬಂದ ಸಿದ್ದಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಠಾಣೆಯಲ್ಲಿ ಬಡಿದಾಡಿದ್ದಲ್ಲದೆ ಠಾಣೆಯ ಹಿಂಭಾಗಕ್ಕೆ ಸಿದ್ದಪ್ಪನನ್ನು ಎಳೆದುದೊಯ್ದು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸಿದ್ದಪ್ಪ ಅವರನ್ನು ಕಿಮ್ಸಗೆ ದಾಖಲು ಮಾಡಲಾಗಿದೆ.
Kshetra Samachara
22/02/2022 01:43 pm