ಹುಬ್ಬಳ್ಳಿ: ನಗರದ ಆರ್.ಎಂ ಲೋಹಿಯಾನಗರದಲ್ಲಿ ನಡೆದಿರುವ ಸ್ಪೋರ್ಟ್ಸ್ ಕ್ಲಬ್ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಕಟ್ಟಡ ಮೇಲಿಂದ ಕೆಳಗೆ ಬಿದ್ದು ಮೃತನಾಗಿರುವ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಂಜುನಾಥ ರಾಮಣ್ಣನವರ (24) ಮೃತರಾದವರು. ಕಟ್ಟಡ ಕಟ್ಟಲು ಸುಸಜ್ಜಿತವಾಗಿ ಕಾರ್ಮಿಕರಿಗೆ ಅನುಕೂಲ ಮಾಡದಿರುವುದರಿಂದ ಪಕ್ಕಿರಪ್ಪ ಬಂಡಿವಾಡ, ಮ್ಯಾನೇಜರ್ ಭೂಪತಿ ಮತ್ತು ಮೋಹನ ಎಂಬುವವರ ನಿರ್ಲಕ್ಷ್ಯದಿಂದ ಮೃತರಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
19/02/2022 09:24 am