ಹುಬ್ಬಳ್ಳಿ: ಕಳ್ಳರು ಹಾಸ್ಟೆಲ್ ಹಾಗೂ ಪಿಜಿಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವದು ಸಾಮಾನ್ಯವಾಗಿದೆ. ವಿದ್ಯಾನಗರದ ಶಿರೂರ ಪಾರ್ಕ್ ಬಳಿಯ ಪವನ ಪಿಜಿಯಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದು, ಕಳ್ಳನ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪಿಜಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಪಿಜಿಯಲ್ಲಿನ ರೂಮ್‌ಗೆ ನುಗ್ಗಿದ ಕಳ್ಳ ಲ್ಯಾಪ್‌ಟಾಪ್ ಎಗರಿಸಿ ಪರಾರಿಯಾಗಿದ್ದಾನೆ. ಕಳ್ಳ ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯಗಳು,ಪಿಜಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/02/2022 04:32 pm