ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗನ್ ಗಲಾಟೆ: ಆಗಾಗ ಹೊರ ಬರುತ್ತಲೇ ಇವೆ ಪಿಸ್ತೂಲ್‌ಗಳು

ಧಾರವಾಡ: ಅಂಗಡಿ ಇಡುವ ವಿಚಾರವಾಗಿ ನಡೆದ ಸಣ್ಣ ಜಗಳದಲ್ಲಿ ಬಿಜೆಪಿ ಮುಖಂಡನೋರ್ವ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದ ಪ್ರಕರಣ ನಡೆದಿತ್ತು. ಈಗ ಆ ಪಿಸ್ತೂಲ್‍ನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಅಷ್ಟಕ್ಕೂ ಏನಿದು ಘಟನೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.

ತಳ್ಳುವ ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಾಗ ಬಿಜೆಪಿ ಮುಖಂಡನೋರ್ವ ಪಿಸ್ತೂಲ್ ತೆಗದು ಗುಂಡು ಹಾರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ ಘಟನೆ ಧಾರವಾಡ ತಾಲೂಕಿನ ಹೊಸ ತೇಗೂರ ಗ್ರಾಮದಲ್ಲಿ ನಡೆದಿತ್ತು. ನಾಗಪ್ಪ ಗಾಣಿಗೇರ ಎಂಬ ಬಿಜೆಪಿ ಮುಖಂಡನೇ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಮುಂದಾಗಿದ್ದ. ಮಲ್ಲೀಕ್ ಎಂಬಾತ ಸರ್ಕಾರಿ ಜಾಗದಲ್ಲಿ ಎಗ್‍ರೈಸ್ ಅಂಗಡಿ ಇಡಲು ಮುಂದಾದಾಗ, ಬಿಜೆಪಿ ಮುಖಂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಚಾರವಾಗಿ ಮಲ್ಲೀಕ್ ಪರ ನಾಗಪ್ಪನ ಜೊತೆ ಮಾತನಾಡಲು ಬಂದಿದ್ದ ಮಡಿವಾಳಪ್ಪನಿಗೆ, ನಾಗಪ್ಪ ಪಿಸ್ತೂಲ್ ತೋರಿಸಿದ್ದ. ಈ ಪ್ರಕರಣ ನಡೆದ ನಂತರ ಮಡಿವಾಳಪ್ಪ ಗರಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್‌ನಿಂದ ಹೊಡೆಯಲು ಯತ್ನಿಸಿದ್ದಾನೆ ಎಂದು ನಾಗಪ್ಪನ ವಿರುದ್ಧ ಇದೀಗ ಮಡಿವಾಳಪ್ಪ ದೂರು ನೀಡಿದ್ದಾನೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗರಗ ಪೊಲೀಸರು ಆರ್ಮ್ಸ್‌ ಕಾಯ್ದೆಯಡಿ ನಾಗಪ್ಪನ ಮೇಲೆ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಾಗಪ್ಪನಿಗೆ ಯಾವುದೇ ಕ್ರಿಮಿನಲ್ ರೆಕಾರ್ಡ್‌ ಇಲ್ಲದ ಕಾರಣ, ತನಿಖೆ ನಡೆಸುತಿದ್ದು, ತನಿಖೆ ನಂತರ ಬಂಧಿಸುವುದಾದರೆ ಬಂಧಿಸುತ್ತೇವೆ ಎಂದು ಎಸ್‍ಪಿ ಕೃಷ್ಣಕಾಂತ ಹೇಳಿದ್ದಾರೆ. ವಶಕ್ಕೆ ಪಡೆದ ಪಿಸ್ತೂಲ್‌ನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಒಟ್ಟಿನಲ್ಲಿ ಧಾರವಾಡದಂತಹ ಶಾಂತನಗರದಲ್ಲಿಯೂ ಪಿಸ್ತೂಲ್ ಹಿಡಿದು ಧಮ್ಕಿ ಹಾಕುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಸದ್ಯ ಪೊಲೀಸ್ ಇಲಾಖೆ ಇವಕ್ಕೆಲ್ಲ ಕಡಿವಾಣ ಹಾಕಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/02/2022 06:17 pm

Cinque Terre

136.05 K

Cinque Terre

9

ಸಂಬಂಧಿತ ಸುದ್ದಿ