ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲ್ವೆ ಅಧಿಕಾರಿ ಲ್ಯಾಪ್‌ಟಾಪ್ , ಮೊಬೈಲ್ ಕಳವು

ಹುಬ್ಬಳ್ಳಿ: ರೈಲ್ವೆ ಅಧಿಕಾರಿಯೊಬ್ಬರು ಬೆಂಗಳೂರಿನಿಂದ ಧಾರವಾಡಕ್ಕೆ ರಾಣಿ ಚನ್ನಮ್ಮ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿದ್ರೆಗೆ ಜಾರಿದಾಗ ಕಳ್ಳರು ಅಂದಾಜು 1.48 ಲಕ್ಷ ರೂ. ಮೌಲ್ಯದ ಒಂದು ಆ್ಯಪಲ್ ಲ್ಯಾಪ್ ಟಾಪ್, ಮೊಬೈಲ್ , ಸ್ಮಾರ್ಟ್‌ವಾಚ್, ಬಟ್ಟೆ ಸೇರಿದಂತೆ ಇತರೆ ಸಾಮಗ್ರಿಗಳಿದ್ದ ಬ್ಯಾಗ್ ಕಳುವು ಮಾಡಿದ್ದಾರೆ.

ಬೆಂಗಳೂರಿನ ರೈಲ್ವೆ ಲೇಔಟ್‌ನ ಸಾಯಿರಾ ಅವರು ತಮ್ಮ ಮಗಳೊಂದಿಗೆ ಜ .31 ರಂದು ಕರ್ತವ್ಯ ನಿಮಿತ್ತ ಧಾರವಾಡಕ್ಕೆ ಬರುತ್ತಿದ್ದಾಗ ಬ್ಯಾಗ್ ತಮ್ಮ ಬಳಿಯಿಟ್ಟುಕೊಂಡು ಅರಸೀಕೆರೆ ನಿಲ್ದಾಣ ಬಂದಾಗ ಮಲಗಿದ್ದಾರೆ. ಹುಬ್ಬಳ್ಳಿಗೆ ಬರುವಷ್ಟರಲ್ಲಿ ಕಳ್ಳರು ಲ್ಯಾಪ್‌ಟಾಪ್, ಮೊಬೈಲ್ ಇತರೆ ವಸ್ತುಗಳಿಂದ ಬ್ಯಾಗ್ ಕದ್ದುಕೊಂಡು ಹೋಗಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Edited By : Nirmala Aralikatti
Kshetra Samachara

Kshetra Samachara

03/02/2022 01:26 pm

Cinque Terre

24.42 K

Cinque Terre

0

ಸಂಬಂಧಿತ ಸುದ್ದಿ