ಧಾರವಾಡ: ಬೈಕ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ತಾಲೂಕಿನ ಬೋಗೂರು ಗ್ರಾಮದ ಧರ್ಮರಾಜ ಹರಿಜನ ಎಂಬಾತನೇ ಬಂಧಿತ ಆರೋಪಿ. ಬಂಧಿತನಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಒಂದು ರಾಯಲ್ ಎನ್‌ಫೀಲ್ಡ್ ಬೈಕ್, 50 ಸಾವಿರ ರೂಪಾಯಿ ಮೌಲ್ಯದ ಒಂದು ಸ್ಪ್ಲೆಂಡರ್ ಬೈಕ್, ಒಟ್ಟು 1.17 ಲಕ್ಷ ಮೌಲ್ಯದ ವಿವಿಧ ಕಂಪೆನಿಯ ಹತ್ತು ಮೊಬೈಲ್ ಸೇರಿದಂತೆ ಒಟ್ಟು 3.17 ಲಕ್ಷ ರೂಪಾಯಿ ಮೌಲ್ಯದ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.
Kshetra Samachara
02/02/2022 08:02 pm