ಹುಬ್ಬಳ್ಳಿ: ಸುಮಾರು 5 ಲಕ್ಷ ರೂ. ಮೌಲ್ಯದ ವಾಹನದ ರಿಮೋಟ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ನಗರದ ಕಸಬಾಪೇಟ ಪೊಲೀಸ ಠಾಣೆ ಬಂಧಿಸಿದ್ದಾರೆ.
ಕಸಬಾ ಪೇಟ ಪೊಲೀಸರು ಜನವರಿ 21ರಂದು ವರದಿಯಾಗಿದ್ದ ಕಳ್ಳತನದ ಪ್ರಕರಣವನ್ನು ಬೇಧಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಸಿಕಾಟಿಯಾದಲ್ಲಿ ಇದ್ದ ಆರೋಪಿಯನ್ನು ಬಂಧಿಸಿ, ಆತನಿಂದ ಕಳ್ಳತನವಾದ 5 ಲಕ್ಷ ರೂ. ಕಿಮ್ಮತ್ತಿನ ವಾಹನದ ರಿಮೋಟ ಜಪ್ತಿ ಮಾಡಲಾಗಿದೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/01/2022 02:23 pm