ಹುಬ್ಬಳ್ಳಿ: ಅವರೆಲ್ಲ ಪ್ರತಿನಿತ್ಯವೂ ದುಡಿದು ತಿನ್ನುವವರು. ಮುಂದಿನ ತಮ್ಮ ಜೀವನಕ್ಕೆ ಏನೋ ಅನುಕೂಲ ಆಗಲೆಂದು ಅಲ್ಲಿ ಇಲ್ಲಿ ಇಟ್ಟಿದ್ದ ಹಣವನ್ನು ಕೂಡಿಸಿ ಚಿಟಿ ಹೆಸರಿನಲ್ಲಿ ಇಟ್ಟಿದ್ದರು. ಆದರೆ ಆ ಖದೀಮ ಮಾತ್ರ ಬಡವರ ದುಡ್ಡನ್ನು ಹಾಕಿಕೊಂಡು ಪರಾರಿಯಾಗಿದ್ದ. ಈಗ ಅವನು ಪೊಲೀಸರ ಅತಿಥಿಯಾಗಿದ್ದಾನೆ.
ಗೋಕುಲ ರಸ್ತೆಯ ರಾಮಲಿಂಗೇಶ್ವರನ ನಗರದ ನಿವಾಸಿ ರಮೇಶ್ ನಾಗಲೋಟಿ ಬಂಧಿತ ಆರೋಪಿ. ರಾಮಲಿಂಗೇಶ್ವರ ನಗರದ ಸ್ಲಂ ನಿವಾಸಿಗಳ ಹತ್ತಿರ ತಲಾ 2 ಸಾವಿರ ರೂ.ಗಳ ಬಿಸಿ ಮಾಡಿಸಿಕೊಂಡು ಹೆಚ್ಚಿನ ಲಾಭ ಮಾಡುತ್ತೇನೆ ಎಂದು ರಮೇಶ್ ನಂಬಿಸಿದ್ದ. ಅದರಂತೆ ಸುಮಾರು 20ಕ್ಕೂ ಹೆಚ್ಚು ಜನರಿಂದ ಚೀಟಿ (ಬಿಸಿ) ಹೆಸರಿನಲ್ಲಿ ಸುಮಾರು 20 ಲಕ್ಷ ರೂ. ಸಂಗ್ರಹಿಸಿದ್ದರು. ಬಳಿಕ ಈ ಎಲ್ಲ ಹಣವನ್ನು ಪಡೆದು ಪರಾರಿಯಾಗಿದ್ದ. ಈ ಕುರಿತು ನಗರದ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ರಮೇಶ್ ನಿನ್ನೆ ಅಕ್ಷಯಪಾರ್ಕ್‌ನಲ್ಲಿ ಓಡಾಡುತ್ತಿರುವ ಖಚಿತ ಮಾಹಿತಿ ಗೋಕುಲ ರೋಡ್ ಠಾಣೆ ಪಿಐ ಜೆ.ಎಂ. ಕಾಲಿಮಿರ್ಚಿ, ಪಿಎಸ್‌ಐಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ರಮೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರಮೇಶ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ವಂಚನೆಗೆ ಒಳಗಾದ ಸಾರ್ವಜನಿಕರು ಪೊಲೀಸ್ ದೌಡಾಯಿಸಿದ್ದರು. ಅಲ್ಲದೇ ಕೆಲಕಾಲ ಮೋಸ ಮಾಡಿದ ಆರೋಪಿಯ ವಿರುದ್ಧ ಪ್ರತಿಭಟನೆಯನ್ನು ಮಾಡಿದರು.
Kshetra Samachara
29/01/2022 01:28 pm