ಧಾರವಾಡ: ಧಾರವಾಡದ ಚಾಲುಕ್ಯನಗರದಲ್ಲಿನ ಎರಡು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು ಮನೆಯಲ್ಲಿನ ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಚಾಲುಕ್ಯ ನಗರದಲ್ಲಿನ ಪಾಟೀಲ ಎಂಬುವವರ ಮನೆ ಹಾಗೂ ಅದೇ ಸ್ಥಳದಲ್ಲಿನ ಇನ್ನೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ರಾತ್ರಿ ಮನೆಯವರು ಕೀಲಿ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಒಳನುಗ್ಗಿ ಈ ಕೃತ್ಯ ಎಸಗಿದ್ದಾರೆ.
ಪಾಟೀಲ ಎಂಬುವವರ ಮನೆಯಲ್ಲಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ನಗದು ಹಾಗೂ ನಾಲ್ಕೂವರೆ ತೊಲೆ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಇಂದು ಮಧ್ಯಾಹ್ನ ಮನೆಯವರು ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಶ್ವಾನ ದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
27/01/2022 05:48 pm