ಕುಂದಗೋಳ: ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿನ ಮೂರ್ತಿ ಹಾಗೂ ದೇವರಿಗೆ ತೊಡಿಸಲಾಗಿದ್ದ ಗಂಧದ ಮುಖ ಪೂಜಾ ಸಾಮಗ್ರಿಗಳು ಕಳ್ಳತನವಾದ ಘಟನೆ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅವಧಿಯಲ್ಲಿ ನಡೆದಿದೆ.
ಹೌದು! ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿ ಹಾಗೂ ಗಂಧದ ಮುಖವನ್ನು ಯಾರೋ ಖದೀಮರು ಕಳ್ಳತನ ಮಾಡಿದ್ದಾರೆ, ಕಮಡೊಳ್ಳಿ ಗ್ರಾಮದಲ್ಲಿ ಪುರಾತನವಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿನ ಪೂಜಾ ಸಾಮಗ್ರಿಗಳು ಸಹ ಕಳ್ಳತನವಾಗಿವೆ.
ಬೆಳಿಗ್ಗೆ ಈ ವಿಷಯ ತಿಳಿದ ಗ್ರಾಮಸ್ಥರು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ, ಒಟ್ಟಾರೆ ದೇವರ ಮೂರ್ತಿಯೆ ಕಳ್ಳರ ಪಾಲಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
Kshetra Samachara
25/01/2022 04:43 pm