ಪಬ್ಲಿಕ್ ನೆಕ್ಸ್ಟ್ ವಿಶೇಷ-
ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅವರು ಭಾರತ ಸ್ವತಂತ್ರ ಪೂರ್ವದಲ್ಲೇ ಭಾರತಾಂಬೆಯ ಸೇವೆ ಮಾಡಿದ್ದರು. ಎರಡನೇ ಮಹಾಯುದ್ಧದಲ್ಲಿ ಭಾರತದ ಗೆಲುವಿಗೆ ಸಾಕ್ಷಿಯಾಗಿದ್ದವರು. ಅಂತಹ ಸೇನಾನಿಗೆ ಅಂದಿನ ಸರ್ಕಾರ ಗುರುತಿಸಿ ಅವರಿಗೆ ಜಾಗ ನೀಡಿತ್ತು. ಆದರೆ ಅದಾದ ಬಳಿಕ ಈಗ ಜಾಗವೂ ಇಲ್ಲದೆ ಪರಿಹಾರವೂ ಸಿಗದೆ ಸೇನಾನಿಯ ಕುಟುಂಬ ಕಂಗಾಲಾಗಿದೆ. ಯಾಕೆ ? ಏನ್ ಇದರ ಹಿಂದಿನ ಮರ್ಮ. ಎಲ್ಲವನ್ನೂ ಹೇಳುತ್ತೇವೆ ಬನ್ನಿ.
ಹೌದು.ಹುಬ್ಬಳ್ಳಿಯ ಕಾಳಿದಾಸ ನಗರದ ನಿವಾಸಿಯಾದ ಪ್ರಭಾಕರ ಅಠವಲೆ ಅವರ ತಾತ ಪಾಂಡುರಂಗ ಅಠವಲೆ, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಕ್ಕೂ ಮುನ್ನವೇ ಆ ಯೋಧ ತನ್ನನ್ನು ತಾನು ದೇಶಕ್ಕೆ ಸಮರ್ಪಣೆ ಮಾಡಿಕೊಂಡಿದ್ದರು. ಅದರಂತೆ 1952 ರಲ್ಲಿ ಅವರು ನಿವೃತ್ತಿ ಹೊಂದಿದ ಬಳಿಕ, ಅವರ ಸೇವೆ ಮೆಚ್ಚಿದ ಆಗಿನ ಬಾಂಬೆ ಸರ್ಕಾರ, ಅವರಿಗೆ ಹುಬ್ಬಳ್ಳಿಯ ಈಗಿನ ತೊಳನಕೆರೆ ಆಗಿನ ತೋಪಲಗಟ್ಟಿಯಲ್ಲಿ ಒಟ್ಟು 15 ಎಕರೆ 38 ಗುಂಟೆ ಜಾಗವನ್ನ ಅವರ ಸೇವೆಗಾಗಿ ನೀಡಿತ್ತು.
ಅದಾದ ಬಳಿಕ ಅಲ್ಲಿಯೇ ಅವರು 10 ವರ್ಷಗಳ ಕಾಲ ಬೇಸಾಯ ಮಾಡಿಕೊಂಡು ಬಂದಿದ್ದರು. ಆದರೆ ದಿಢೀರನೆ ಬಂದ ಅಧಿಕಾರಿಗಳು ಅಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಬೇಕು ಅಂತ, ಇದ್ದಿದ್ದ ಎಲ್ಲ ಜಾಗವನ್ನ ಕಬ್ಜ ಮಾಡಿಕೊಂಡಿದ್ದಾರೆ. ಆದರೆ ಈಗ ಆ ಜಾಗದಲ್ಲಿ ಕಟ್ಟಿದ್ದೇ ಬೇರೆ.
ಬೈಟ್: ಪ್ರಭಾಕರ ಅಠವಲೆ, ಪಾಂಡುರಂಗ ಮೊಮ್ಮಗ
ಒಟ್ಟಾರೆ ದಿವಂಗತ ಮಾಜಿ ಸೈನಿಕನಿಗೆ ಸಿಗಬೇಕಿದ್ದ ಜಾಗ ಇದೀಗ ಅಕ್ರಮ ಸಕ್ರಮ ಜಾಗವಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆ ಇದರಲ್ಲಿ ಎದ್ದು ಕಾಣುತ್ತಿದೆ. ಇನ್ನಾದ್ರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಎಲ್ಲಾದರೂ ಅವರಿಗೆ ಅನುದಾನ ನೀಡಿ ಸೈನಿಕ ಕುಟುಂಬಕ್ಕೆ ಆಸರೆಯಾಗಬೇಕಾಗಿದೆ.
ಈರಣ್ಣ ವಾಲಿಕಾರ
ಪಬ್ಲಿಕ್ ನೆಕ್ಸ್ಟ್
Kshetra Samachara
06/01/2022 05:03 pm