ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಅವಳಿನಗರದ ಎರಡು ಕಡೆಗಳಲ್ಲಿ ಚಾಕುವಿನಿಂದ ಇರಿದ ಘಟನೆಗಳು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ ಹಾಗೂ ಬೇಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.
ಸೋಮವಾರ ತಡರಾತ್ರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಶ್ಚಂದ್ರ ಕಾಲೋನಿಯಲ್ಲಿ ರಾಜಶೇಖರ್ ಅಯ್ಯರ್(40) ಗೆ ಚಾಕು ಇರಿತವಾಗಿದ್ದು, ಸಣ್ಣಪುಟ್ಟ ಜಗಳಕ್ಕೆ ನಾಲ್ವರ ನಡುವೆ ನಡೆದ ಘಟನೆಯಿಂದ ಚಾಕು ಇರಿತವಾಗಿದೆ. ಇನ್ನೂ ಪ್ರಕರಣದಲ್ಲಿ ಪವನ್ ಬಿಜವಾಡ್, ಶುಭಮ್ ಬಿಜವಾಡ್, ಮೋಹನ್ ಗಂಡಿನವರ ಮತ್ತು ರಾಬಿನ್ ಮರಿಯಾಳ ಆರೋಪಿತರಾಗಿದ್ದು, ಗಾಯಗೊಂಡ ರಾಜಶೇಖರನನ್ನು ಕಿಮ್ಸ್'ಗೆ ದಾಖಲಿಸಲಾಗಿದೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಬೇಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿಬಾ ನಗರದಲ್ಲಿ ನವೀನ ಎಂಬ ಯುವಕನಿಗೆ ಚಾಕು ಇರಿತವಾಗಿದೆ. ಗಾಯಗೊಂಡ ನವೀನ ಕಿಮ್ಸ್'ಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
28/12/2021 09:51 am