ಧಾರವಾಡ: ಗುತ್ತಿಗೆದಾರರೊಬ್ಬರ ಮೇಲೆ ನಾಲ್ಕೈದು ಜನ ಬಡಿಗೆಗಳಿಂದ ಹಲ್ಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರಾಗಿರುವ ಅಜೀಜ್ ಮಾಲಿ ಎಂಬುವವರೇ ಹಲ್ಲೆಗೊಳಗಾದವರು.
ಆಟೊದಲ್ಲಿ ಬಂದ ಹಲವರು ಏಕಾಏಕಿ ಅಜೀಜ್ ಅವರ ಮೇಲೆ ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಅಜೀಜ್ ಅವರಿಗೆ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಾಗಿಲ್ಲ. ಈ ಸಂಬಂಧ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ.
Kshetra Samachara
24/11/2021 09:02 pm