ಹುಬ್ಬಳ್ಳಿ: ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇ ಮಂಟೂರು ರೋಡನ ಐವರು ಎಲ್ಲಿಂದಲೋ ಮೊಬೈನ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ಆಟೋದಲ್ಲಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಬೆಂಡಿಗೇರಿ ಠಾಣೆ ಇನ್ಸ್ ಪೆಕ್ಟರ್ ಶಾಮರಾಜ್ ಸಜ್ಜನ್ ನೇತೃತ್ವದ ತಂಡ ಐವರನ್ನು ವಶಕ್ಕೆ ಪಡೆದು 1 ಲಕ್ಷ 80 ಸಾವಿರ ಮೌಲ್ಯದ 14 ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಆಟೋ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Kshetra Samachara
23/11/2021 12:17 pm