ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಕೈಗಾರಿಕಾ ಪ್ರದೇಶದ ಅವಲಕ್ಕಿ ಫ್ಯಾಕ್ಟರಿಯ ಮಾಲೀಕರೊಬ್ಬರಿಂದ ಗುಜರಾತ ಮೂಲದ ಕಾರ್ಮಿಕನೊಬ್ಬ 1,50,000 ರೂ. ಸಾಲ ಪಡೆದು ಹಾಗೂ 70,000 ರೂ. ಮೌಲ್ಯದ ವಿವಿಧ ಟಿಕೆಟ್ ಗಳನ್ನು ಪಡೆದು ಕುಟುಂಬ ಸಮೇತ ಪರಾರಿಯಾಗಿದ್ದಾನೆ.
ಗುಜರಾತ ರಾಜ್ಯದ ರಾಜಕೋಟ ಮೂಲದ ಬಿಲೇಶಬಾಯಿ ಪರ್ಮಾರ ವಂಚಿಸಿದ ಆರೋಪಿ. ಮೃತ್ಯುಂಜಯ ಬಡಗಣ್ಣವರ ಮಾಲೀಕತ್ವದ ಅವಲಕ್ಕಿ ಹಾಗೂ ಚುರುಮರಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆಂದು ಬಿಲೇಶ ಕುಟುಂಬ ಸಮೇತ ಬಂದು ಸೇರಿಕೊಂಡಿದ್ದ. ಕೆಲ ತಿಂಗಳ ಕಾಲ ಕೆಲಸ ಮಾಡಿದ್ದ. ಅಡಚಣೆ ನೆಪ ಹೇಳಿ ಸೆ. 25ರಂದು 1,50,000 ರೂ.ಗಳನ್ನು ಚೆಕ್ ಮುಖಾಂತರ ಪಡೆದಿದ್ದ. ಈ ಹಣ ತೀರುವವರೆಗೆ ಕೆಲಸ ಮಾಡುವುದಾಗಿ ನಂಬಿಸಿದ್ದ.
ಈ ನಡುವೆ ತನ್ನ ಊರಿಗೆ ಹೋಗಿ ಬರಲೆಂದು ಮೃತ್ಯುಂಜಯ ಅವರ ಪರಿಚಯದ ಓಂಕಾರ್ ಟ್ರಾವೆಲ್ ಏಜೆನ್ಸಿ ಮೂಲಕ ಇದುವರೆಗೆ ಒಟ್ಟು 70,000 ರೂ. ಮೌಲ್ಯದ ಟಿಕೆಟ್ ಗಳನ್ನು ಪಡೆದಿದ್ದ. ಬಳಿಕ ಹಣ ವಾಪಸ್ ನೀಡದೇ ಪರಾರಿಯಾಗಿದ್ದಾನೆ.
Kshetra Samachara
18/11/2021 09:01 am