ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಾಡಹಗಲೇ ಮುಂಬಾಗಿಲಿನ ಕೀಲಿ ಮುರಿದು 20 ತೊಲೆ ಚಿನ್ನದ ಆಭರಣ ಕಳ್ಳತನ

ಹುಬ್ಬಳ್ಳಿ: ನಗರದ ಗೋಕುಲ್ ರಸ್ತೆಯ ಅಶೋಕ ವನ ಬಡಾವಣೆಯಲ್ಲಿ ಹಾಡಹಗಲೇ ಕಳ್ಳರು ಮುಂಬಾಗಿಲಿನ ಕೀಲಿ ಮುರಿದು ಸುಮಾರು 10 ಲಕ್ಷ ರೂ ಮೌಲ್ಯದ 20 ತೊಲೆ ಬಂಗಾರದ ಆಭರಣಗಳನ್ನು ಕಳುವು ಮಾಡಿದ ಘಟನೆ ನಡೆದಿದೆ.

ಅಟೋಮೋಬೈಲ್ ಅಂಗಡಿ ಹೊಂದಿರುವ ರಾಹುಲ್ ರಾಮಕೃಷ್ಣ ಟಿಕಾರೆ(36) ಎಂಬುವವರ ಮನೆಯಲ್ಲಿಯೇ ಕಳ್ಳತನ ನಡೆದಿದ್ದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಮನೆಯ ಒಳಕ್ಕೆ ನುಗ್ಗಿ ಕಪಾಟಿನಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಒಡವೆ ಹಾಗೂ 15ರಿಂದ 20 ಸಾವಿರ ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ರಾಹುಲ್ ಬೆಳಿಗ್ಗೆ 10ರ ಸುಮಾರಿಗೆ ಅಂಗಡಿಗೆ ತೆರಳಿದ್ದು ಇವರ ಪತ್ನಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೆಲಸಕ್ಕೆ ಹೋಗಿದ್ದಾರೆ. ಇವರ ತಾಯಿ ಸಹ ಬೇರೆ ಊರಿಗೆ ಹೋದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಹೋದಾಗ ಕಳುವು ಮಾಡಲಾಗಿದೆ.

ಅಬಕಾರಿ ನಿವೃತ್ತ ಡಿಎಸ್‌ಪಿ ಈಳಿಗೇರ ಇವರ ಮನೆಯ ಕೆಳ ಅಂತಸ್ತಿನಲ್ಲಿ ರಾಹುಲ್ ಟಿಕಾರೆ ಬಾಡಿಗೆಗೆ ಇದ್ದು 12ರ ಸುಮಾರಿಗೆ ಮೇಲಂತಸ್ತಿನಲ್ಲಿರುವ ಮನೆಯ ಮಾಲೀಕರು ಬಾಗಿಲು ತೆರೆದಿರುವುದನ್ನು ನೋಡಿ ಬಾಗಿಲು ಹಾಕದೇ ಹೋಗಿದ್ದೀರಲ್ಲ ಎಂದು ಕರೆ ಮಾಡಿದಾಗ ಕೂಡಲೆ ಧಾವಿಸಿ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಗೋಕುಲ್ ರಸ್ತೆ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕ ತಕ್ಷಣ ಇನ್ಸ್ ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರಲ್ಲದೇ ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ.

ಸಿಸಿಟಿವಿಯಲ್ಲಿ ಕಳ್ಳರ ದೃಶ್ಯಗಳು ಸೆರೆಯಾಗಿದ್ದು, ಇವುಗಳ ಅಧಾರದ ಮೇಲೆ ಗೋಕುಲ್ ರೋಡ್ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ‌.

Edited By : Nagaraj Tulugeri
Kshetra Samachara

Kshetra Samachara

26/10/2021 04:39 pm

Cinque Terre

29.91 K

Cinque Terre

0

ಸಂಬಂಧಿತ ಸುದ್ದಿ