ಹುಬ್ಬಳ್ಳಿ- ಹುಬ್ಬಳ್ಳಿ ನಿವಾಸಿಗೆ ಅಪರಿಚಿತರು ಕ್ರೆಡಿಟ್ ಕಾರ್ಡ್‌ಗೆ 5,250 ರೂ, ರಿವಾರ್ಡ್ ಬಂದಿದೆ. ಅದನ್ನು ಪಡೆಯದಿದ್ದರೆ ಅವಧಿ ಮುಗಿಯುತ್ತದೆ ಎಂದು ನಂಬಿಸಿ ಅವರಿಂದ ವಿವಿಧ ಮಾಹಿತಿ ಪಡೆದು ಆನ್‌ಲೈನ್ ಮೂಲಕ 1,92,800 ರೂ, ವರ್ಗಾಯಿಸಿಕೊಂಡು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಳೇ ಹುಬ್ಬಳ್ಳಿಯ ವಿನಾಯಕ ಎಂಬುವರಿಗೆ ಅ.3 ರಂದು ಸಂದೇಶ ಕಳುಹಿಸಿದ್ದರು. ಅದರಲ್ಲಿನ ಲಿಂಕ್ ಕ್ಲಿಕ್ ಮಾಡಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ನ ವಿವರ ಸಬ್‌ಮಿಟ್ ಮಾಡಿದ್ದರು. ಬಳಿಕ ಓಟಿಪಿ ಸಂಖ್ಯೆ ಹಾಕದಿದ್ದರೂ ಗಮನಕ್ಕೆ ಬಾರದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/10/2021 07:02 pm