ಹುಬ್ಬಳ್ಳಿ- ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ಕುರಿತಂತೆ ಡಿಸಿಪಿ ಕೆ. ರಾಮರಾಜನ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ಕಳೆದ ತಿಂಗಳು 30 ರಂದು ಅಕ್ರಮವಾಗಿ ಹಿಡಿದಿದ್ದ ಗಾಂಜಾವನ್ನು ಪೊಲೀಸರೇ ಮಾರಾಟ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ನವನಗರ ಹಾಗೂ ಗೋಕುಲ ರೋಡ್ ಎರಡು ಠಾಣೆಯ 7 ಜನ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಪಿ ರಾಮರಾಜನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಅವರ ಆದೇಶದಂತೆ,ವಿಚಾರಣೆ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದರು.ಜೊತೆಗೆ ಕಳೆದ ಒಂದು ವಾರದಿಂದ ವಿಚಾರಣೆ ನಡೆಸಿ, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ ಎಂಬ ಆರೋಪ ಪೊಲೀಸರ ಮೇಲೆ ಇದೆ.
ಯುವ ಸಮೂಹಕ್ಕೆ ಪೊಲೀಸರೇ ಗಾಂಜಾ ಸಪ್ಲಾಯ್ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ. ಯಾಕೆಂದ್ರೆ ಕಳೆದ ಎರಡು ವರ್ಷದಲ್ಲಿ ಹುಬ್ಬಳ್ಳಿಯಲ್ಲಿ ಯುವ ಸಮೂಹ ಗಾಂಜಾ ಸೇವನೆ ಹೆಚ್ಚು ಮಾಡುತ್ತಿದ್ದಾರೆ. ಹೈ ಪ್ರೋಫೈಲ್ ಮಕ್ಕಳಿಗೆ ಪೊಲೀಸರಿಂದಲೆ ಗಾಂಜಾ ಸಪ್ಲಾಯ್ ಆಗುತ್ತಿದೆ ಎಂಬ ಆರೋಪ ಪೋಲಿಸರ ವಿರುದ್ಧ ಕೇಳಿ ಬರುತ್ತಿದೆ.
Kshetra Samachara
10/10/2021 08:43 pm