ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮುಗ್ಧನಂತೆ ಬಂದು ಗ್ರಾಮ ಲೆಕ್ಕಾಧಿಕಾರಿಯ ಮೊಬೈಲ್‌ನ್ನೇ ಎಗರಿಸಿದ ಕಳ್ಳ

ಧಾರವಾಡ: ಧಾರವಾಡದ ತಹಶೀಲ್ದಾರ್​ ಕಚೇರಿಗೆ ಎಂಟ್ರಿಕೊಟ್ಟ ಖದೀಮನೊಬ್ಬ ಗ್ರಾಮ ಲೆಕ್ಕಾಧಿಕಾರಿ ಮೊಬೈಲನ್ನೇ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗ್ರಾಮ ಲೆಕ್ಕಾಧಿಕಾರಿ ರೇಖಾ ಗಾಣಿಗೇರ ಎಂಬುವರು ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಟೇಬಲ್ ಮೇಲೆ ಮೊಬೈಲ್ ಇಟ್ಟಿರುವುದನ್ನು ಗಮನಿಸಿದ ಚಾಲಾಕಿ‌ ಕಳ್ಳ, ಮುಗ್ಧನಂತೆ ಬಂದು ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ‌.

ಈ ಸಂಬಂಧ ರೇಖಾ ಅವರು ಧಾರವಾಡದ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

29/09/2021 11:55 am

Cinque Terre

47.78 K

Cinque Terre

0

ಸಂಬಂಧಿತ ಸುದ್ದಿ