ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗ್ರಾಹಕರಿಗೆ ವಸ್ತುಗಳನ್ನು ತಲುಪಿಸದೇ ವಂಚಿಸಿದ ಲಾರಿ ಚಾಲಕ: ದೂರು ದಾಖಲು

ಹುಬ್ಬಳ್ಳಿ: ಗುಜರಿ ವಸ್ತುಗಳನ್ನು ತುಂಬಿಕೊಂಡು ಗ್ರಾಹಕರಿಗೆ ತಲುಪಿಸದೇ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು, ನಗರದಿಂದ 1.50 ಲಕ್ಷ ರೂ . ಮೌಲ್ಯದ ಗುಜರಿ ವಸ್ತುಗಳನ್ನು ತುಂಬಿಕೊಂಡು ಮಹಾರಾಷ್ಟ್ರಕ್ಕೆ ಹೊರಟ್ಟಿದ್ದ ಲಾರಿ ಚಾಲಕ , ಗ್ರಾಹಕರಿಗೆ ತಲುಪಿಸದೆ ಪರಾರಿಯಾಗಿದ್ದಾನೆ. ಕಾರವಾರ ರಸ್ತೆಯ ಚಂದನಸಿಂಗ್ ಭವಾರಿ ವಂಚನೆಗೀಡಾದ ವ್ಯಕ್ತಿಯಾಗಿದ್ದು, ಚಂದನಸಿಂಗ್ ಅವರ ಕಾರವಾರ ರಸ್ತೆಯ ಅಂಗಡಿಯಿಂದ 1.50 ರೂ . ಮೌಲ್ಯದ 25 ಟನ್ ಗುಜರಿ ವಸ್ತುಗಳನ್ನು ಲಾರಿಯಲ್ಲಿ ತುಂಬಲಾಗಿತ್ತು. ಮಹಾರಾಷ್ಟ್ರದ ಆಜಾನಿ ಟ್ರೇಡಿಂಗ್ ಕಂಪನಿಗೆ ತಲುಪಿಸುವಂತೆ ಚಾಲಕನಿಗೆ ಹೇಳಿ ಕಳುಹಿಸಿದ್ದರು. ಆದರೆ , ಚಾಲಕ ಅಲ್ಲಿಗೆ ಮಾಲು ತಲುಪಿಸದೆ ಪರಾರಿಯಾಗಿದ್ದಾನೆ ಎಂದು ಹಳೆ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

18/09/2021 12:32 pm

Cinque Terre

23.16 K

Cinque Terre

0

ಸಂಬಂಧಿತ ಸುದ್ದಿ