ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೋಡ್ ರೋಮಿಯೋಗೆ ಕರಾಟೆ ಪಂಚ್ ಕೊಟ್ಟ ಪತ್ರಕರ್ತೆ..!

ಹುಬ್ಬಳ್ಳಿ: ಕೆಲಸಕ್ಕೆ ತೆರಳುತ್ತಿದ್ದ ಪತ್ರಕರ್ತೆಗೆ ರಸ್ತೆಯಲ್ಲಿ ಚುಡಾಯಿಸಿ‌, ಅಸಭ್ಯವಾಗಿ ವರ್ತಿಸಿದ ರೋಡ್ ರೋಮಿಯೋ ಸ್ಥಳೀಯರು‌ ಸೇರಿದಂತೆ ಮಹಿಳಾ ಪತ್ರಕರ್ತೆ ಬಿಸಿ ಬಿಸಿ ಕಜ್ಜಾಯ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ದಿನಪತ್ರಿಕೆಯೊಂದರಲ್ಲಿ ಕೆಲಸ‌ ಮಾಡುವ ಮಹಿಳಾ‌ ಪತ್ರೆಕರ್ತೆ ನಿನ್ನೆ ಸಂಜೆ ಕೆಲಸಕ್ಕೆ ತೆರಳುವ ವೇಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ‌ ಜನನಿಬಿಡ ಪ್ರದೇಶದ ಬಳಿ ರೋಡ್ ರೋಮಿಯೋ ಮಹಿಳಾ‌ ಪತ್ರಕರ್ತೆಯನ್ನ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ‌.‌ಈ ವೇಳೆ ಪೊಲೀಸರು ಹಾಗೂ ಕಚೇರಿಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ ಪತ್ರಕರ್ತೆ ಸ್ಥಳೀಯರ ಸಹಾಯದಿಂದ ರೋಡ್ ರೋಮಿಯೋನನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ರೋಡ್ ರೋಮಿಯೋಗೆ ಮಹಿಳಾ ಪತ್ರಕರ್ತೆ ಕರಾಟೆ ಪಂಚ್ ನೀಡಿರುವುದಾಗಿ ತಮ್ಮ ಪೇಸಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಮಹಿಳಾ ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನನ್ನ ಸ್ಥಳೀಯರು ಹಿಡಿದು ಥಳಿಸಿದಲ್ಲದೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಶದಲ್ಲಿರುವ ಯುವಕ ಒಮ್ಮೆ ತಾನೂ ಬೆಂಗಳೂರು. ಇನ್ನೊಮ್ಮೆ ಬಿಹಾರ. ಮತ್ತೊಮ್ಮೆ ಕೇಳಿದಾಗ ಜಾರ್ಖಂಡ ಮೂಲದವನು ಎಂದು ಹೇಳುತ್ತಿರುವ ಪರಿಣಾಮ ಯುವಕನನ್ನ ವಶಕ್ಕೆ ಪಡೆದಿರುವ ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸರು ಯುವಕನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬಿಹಾರ ಮೂಲದ ಈ ಯುವಕನ ಬಗ್ಗೆ ಪೊಲೀಸರು ಹಿನ್ನಲೆ ಪತ್ತೆ ಮಾಡುತ್ತಿದ್ದು ಘಟನೆಯ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

18/09/2021 12:02 pm

Cinque Terre

38.96 K

Cinque Terre

13

ಸಂಬಂಧಿತ ಸುದ್ದಿ