ಕಲಘಟಗಿ: ಹೈದರಾಬಾದನಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಿ ತಹಶಿಲ್ದಾರಗೆ ಮನವಿಯನ್ನು ಕಲಘಟಗಿ ಯುವಪಡೆಯಿಂದ ನೀಡಲಾಯಿತು.
ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಯುವಕರು,ಶೀಘ್ರ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅತ್ಯಾಚಾರಿಗಳ ವಿರುದ್ಧ ಬಲಿಷ್ಠ ಕಾನೂನುಗಳನ್ನು ಜಾರಿಗೆ ತರ ಬೇಕು,ಸಂತ್ರಸ್ತರ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಹನುಮಂತ ಚವರಗುಡ್ಡ,ಸಾಗರ ಚಿಂತಾಮಣಿ,ಸಂದೀಪ ಬೋಳಾರ,ನವೀನ ಸೋನಾರ,ಪ್ರಶಾಂತ ಕಲಾಲ,ಸಾಧಿಕ್ ಪಾಟೀಲ,ಗಣೇಶ,ಶೌಕತ ಜಂಡೇವಾಲೆ,ವಿನಾಯಕ ರಾಟಿ,ನಾಗರಾಜ ಕಟ್ಟಿಮನಿ,ಮಂಜುನಾಥ ಕೋಟಿ ಉಪಸ್ಥಿತರಿದ್ದರು.
Kshetra Samachara
14/09/2021 07:53 pm