ನವಲಗುಂದ : ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಇತ್ತೀಚಿಗೆ ಮನೆ ಮುಂದೆ ನಿಲ್ಲಿಸಲಾಗುತ್ತಿದ್ದ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ ಆಗುತ್ತಿದ್ದು, ಬೈಕ್ ನ ಪೆಟ್ರೋಲ್ ಪೈಪ್ ಕಟ್ ಮಾಡಿ ಪೆಟ್ರೋಲ್ ಕಳ್ಳತನ ಮಾಡಲಾಗುತ್ತಿದೆಯಂತೆ.
ಇನ್ನು ಪೆಟ್ರೋಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಳಗವಾಡಿ ಗ್ರಾಮದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿರೋದ್ರಿಂದ ಜನರಲ್ಲಿ ಟೆನ್ಷನ್ ಸಹ ಹೆಚ್ಚಾಗ್ತಿದೆ. ಇದರಿಂದ ಸ್ಥಳೀಯರು ಸಹ ರೋಸಿ ಹೋಗಿದ್ದು, ಗ್ರಾಮದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬುದು ಸಹ ಗ್ರಾಮಸ್ಥರ ಆಗ್ರಹವಾಗಿದೆ.
Kshetra Samachara
11/09/2021 04:32 pm