ಹುಬ್ಬಳ್ಳಿ: ತಾರಿಹಾಳದ ನಾಗರಾಜ ಪಾರ್ಶಿ ಅವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿ, ₹2.60 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಮಲ್ಲಯ್ಯ ಮಠಪತಿ ಬಂಧಿತ ಆರೋಪಿ. ಇನ್'ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ, ಧಾರವಾಡ ಗ್ರಾಮೀಣ ಠಾಣೆ ಪೊಲೀಸರ ಸಹಾಯದಿಂದ ಭಾನುವಾರ ಆರೋಪಿಯನ್ನು ಬಂಧಿಸಿದೆ.
Kshetra Samachara
30/08/2021 11:26 am