ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನಾರ್ದನ ರೆಡ್ಡಿಗೆ 150 ರಿಂದ 200 ವರ್ಷಗಳ ಶಿಕ್ಷೆಯಾಗಬೇಕಿತ್ತು: ಎಸ್.ಆರ್.ಹಿರೇಮಠ..!

ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಯತ್ನಿಸುತ್ತಿರುವ ಜನಾರ್ದನ ರೆಡ್ಡಿಗೆ 150 ರಿಂದ 200 ವರ್ಷಗಳ ಶಿಕ್ಷೆಯಾಗಬೇಕಿತ್ತು. ಆದರೆ ದೇಶದ ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಯಾಕೆ ಸುಮ್ಮನೆ ಕೂತಿದ್ದಾರೆ ಗೊತ್ತಾಗ್ತಿಲ್ಲ ಎಂದು

ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ಧನ ರೆಡ್ಡಿ ಮೇಲೆ 40 ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪವಿದೆ. ಅಕ್ರಮ ಗಣಿಗಾರಿಕೆಯಿಂದ ಪ್ರಾಕೃತಿಕ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಹಿರಿಯ ಅಧಿಕಾರಿ ಯು.ವಿ.ಸಿಂಗ್ ಅವರಿಗೂ ಬೆದರಿಕೆ ಹಾಕಿದ್ದರು.

ಇಂಥವರಿಗೆ ಯಾವುದೇ ಕಾರಣಕ್ಕೂ ಬಳ್ಳಾರಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬಾರದು. ತಂದೆ ಅಥವಾ ತಾಯಿಯ ಅನಾರೋಗ್ಯದ ಕಾರಣದಿಂದ ಬಳ್ಳಾರಿಗೆ ಹೋದರೂ ಅವರ ಮೇಲೆ ನಿಗಾ ಇಡಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಪ್ರಕಾರ ಮುನ್ನೆಡೆದರೆ ರೆಡ್ಡಿಗೆ 150 ರಿಂದ 200 ವರ್ಷ ಜೈಲು ಶಿಕ್ಷೆ ಆಗುತ್ತದೆ. ಅಷ್ಟು ವರ್ಷಗಳ ಕಾಲ ಮನುಷ್ಯ ಜೀವಿಸುವುದೇ ಇಲ್ಲ. ಆದರೆ ರೆಡ್ಡಿ ಮಾಡಿರುವ ಅಪರಾಧ ಕೃತ್ಯಗಳು ಅಷ್ಟು ಗಂಭೀರವಾದವುಗಳಾಗಿವೆ.ಬೇರೆ ದೇಶಗಳಲ್ಲಿ ಈ ರೀತಿಯ ಶಿಕ್ಷೆ ಕೊಟ್ಟದ್ದೂ ಇದೆ ಎಂದರು.

ಜನಾರ್ದನ ರೆಡ್ಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಕೈಕಟ್ಟಿಕೊಂಡು ಕೂತಿದೆಯೋ ಗೊತ್ತಾಗ್ತಿಲ್ಲ. ನ ಖಾವುಂಗಾ, ನ ಖಾನೆ ದೂಂಗಾ ಅನ್ನೋ ಮೋದಿ ಯಾಕೆ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಪ್ರಧಾನಿ ಮೋದಿ ಅವರಿಂದ ವ್ಯವಸ್ಥೆಯ ದುರ್ಬಳಕೆ ನಡೆದಿದೆ‌

ಹಿಂದೆ ಇಂದಿರಾ ಗಾಂಧಿ ಹೀನಾಯವಾಗಿ ಸೋತಂತೆ ಮೋದಿ ಅವರನ್ನು ಹೀನಾಯವಾಗಿ ಸೋಲಿಸುವುದೇ ನಮ್ಮ ಗುರಿ. ಪ್ರಧಾನಿ ಮೋದಿಗೆ ಪಾಠ ಕಲಿಸುವ ಮೂಲಕ ವ್ಯವಸ್ಥೆಯನ್ನು ಬದಲು ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದರು.

Edited By : Shivu K
Kshetra Samachara

Kshetra Samachara

18/08/2021 04:05 pm

Cinque Terre

34.66 K

Cinque Terre

19

ಸಂಬಂಧಿತ ಸುದ್ದಿ