ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ಬೆಂಗಳೂರು ಬಿಟ್ಟು ಹೊರಗಡೆ ಹೋಗುವಂತಿಲ್ಲ

ಧಾರವಾಡ: ವಿನಯ್ ಕುಲಕರ್ಣಿಗೆ ಸುಪ್ರೀಂ ಜಾಮೀನು ಮಂಜೂರು ಮಾಡಿದ್ದು, ಅವರು ರಾಜಧಾನಿ ಬೆಂಗಳೂರು ಬಿಟ್ಟು ಹೊರಗಡೆ ಹೋಗುವಂತಿಲ್ಲ. ಹಾಗೇನಾದರೂ ಹೋಗಬೇಕಾದರೆ ಸುಪ್ರೀಂಕೋರ್ಟ್ ಅನುಮತಿ ಪಡೆದು ಹೋಗಬೇಕು ಎಂದು ಹೈಕೋರ್ಟ್ ಹಿರಿಯ ವಕೀಲ ಆನಂದ ಕೊಳ್ಳಿ ಹೇಳಿದರು.

ಸುಪ್ರೀಂಕೋರ್ಟ್‌ನಲ್ಲಿ ವಿನಯ್‌ಗೆ ಜಾಮೀನು ಮಂಜೂರು ಮಾಡಿಸುವ ವಕೀಲರ ತಂಡದ ಸದಸ್ಯರಾಗಿದ್ದ ಆನಂದ ಕೊಳ್ಳಿ, ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವವರೆಗೂ ರಾಜಧಾನಿಯಲ್ಲಿಯೇ ಇರಬೇಕು. ಧಾರವಾಡಕ್ಕೆ ಯಾವುದೇ ಕಾರಣಕ್ಕೂ ಕಾಲಿಡಬಾರದು ಎಂದು ಸುಪ್ರೀಂ ಷರತ್ತು ಹಾಕಿದೆ ಎಂದರು.

ವಿನಯ್ ಕುಲಕರ್ಣಿ ಪರ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ಹಾಕಿದ್ದೆವು. ಕಾನೂನು ಪ್ರಕಾರ ಸಿಬಿಐ ನಡೆ ತಪ್ಪು ಎಂದು ನಾವು ವಾದಿಸಿದ್ದೆವು. ನಮ್ಮ ವಾದವನ್ನು ಸುಪ್ರೀಂ ಪುರಸ್ಕರಿಸಿದೆ. ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಎರಡು ತಿಂಗಳಲ್ಲಿ ವಿಚಾರಣೆ ನಡೆಸಿ ಮುಗಿಸಲು ಸೂಚಿಸಿದೆ ಎಂದರು.

ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಕಾನೂನು ಪ್ರಕಾರ ಸರಿಯೇ ಎನ್ನುವ ವಿಚಾರ ಬೆಂಗಳೂರು ಹೈಕೋರ್ಟ್‌ನಲ್ಲಿ ನಿರ್ಧಾರ ಆಗಲಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಮೂರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅದರಲ್ಲಿ ಒಂದು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆಗ ಯೋಗೀಶಗೌಡರ ಅಣ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೂ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಇದನ್ನೇ ನಾವು ಸುಪ್ರೀಂನಲ್ಲಿ ಚಾಲೆಂಜ್ ಮಾಡಿದ್ದೆವು. ಇದೀಗ ಸುಪ್ರೀಂ ಈ ನಿರ್ಧಾರವನ್ನು ಹೈಕೋರ್ಟ್‌ ನಿರ್ಧಾರಕ್ಕೆ ಬಿಟ್ಟಿದೆ ಎಂದರು.

Edited By : Manjunath H D
Kshetra Samachara

Kshetra Samachara

12/08/2021 01:15 pm

Cinque Terre

57.97 K

Cinque Terre

0

ಸಂಬಂಧಿತ ಸುದ್ದಿ