ಹುಬ್ಬಳ್ಳಿ: ಡ್ರಾಪ್ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಬೈಕ್ ಸವಾರನಿಗೆ ಚಾಕುನಿಂದ ಇರಿದು ಗಾಯಗೊಳಿಸಿದ ಘಟನೆ ಬಿಡಾಳ ಕ್ರಾಸ್ ಎಸ್.ಎಂ. ಕೃಷ್ಣ ನಗರದ ಬಳಿ ನಡೆದಿದೆ.
ಎಸ್.ಎಂ. ಕೃಷ್ಣ ನಗರ ನಿವಾಸಿ ತೌಫಿಕ್ ಸಲೀಂಸಾಬ್ ಬರುದ್ವಾಲೆ (22) ಚಾಕು ಇರಿತಕ್ಕೊಳಗಾದ ಸವಾರ. ಅಲ್ತಾಫ್ ಪ್ಲಾಟ್‌ನ ಸೈಯ್ಯದ್ ಅಲಿ ಹುಲಮನಿ (20) ಚಾಕುವಿನಿಂದ ಇರಿದ ಆರೋಪಿ. ತೌಫಿಕ್ ತನ್ನ ಸ್ನೇಹಿತ ಯಾಸಿನ್ ಜೊತೆ ಸೋಮವಾರ ಸಂಜೆ ಡಿಯೋ ವಾಹನದಲ್ಲಿ ಬಂಕಾಪುರ ಚೌಕ್‌ದಿಂದ ಮನೆ ಕಡೆಗೆ ಹೊರಟಿದ್ದ. ಈ ವೇಳೆ ದಾರಿ ಮಧ್ಯೆ ಸಿಕ್ಕ ಯಾಸಿನ್ ಪರಿಚಯಸ್ಥ ಸೈಯ್ಯದ್ ಅಲಿ ತನಗೂ ಡ್ರಾಪ್ ಕೊಡುವಂತೆ ಕೇಳಿಕೊಂಡಿದ್ದ. ಇದಕ್ಕೆ ತೌಫಿಕ್ ನಿರಾಕರಿಸಿದ್ದ. ಇಷ್ಟಕ್ಕೇ ಸಿಟ್ಟಾದ ಸೈಯ್ಯದ್ ಅವಾಚ್ಯವಾಗಿ ನಿಂದಿಸಿ, ಹೊಡೆದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಚಾಕುವಿನಿಂದ ತೌಫಿಕ್ ಬಲ ತೊಡೆಗೆ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/08/2021 11:51 am