ಹುಬ್ಬಳ್ಳಿ: ರೈಲ್ವೆ ಹಳಿಯಲ್ಲಿ ಛಿದ್ರಗೊಂಡಿರುವ ಅಪರಿಚಿತ ಮೃತ ದೇಹವೊಂದು ಪತ್ತೆಯಾಗಿರುವ ಘಟನೆ, ನಗರದ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದ ಹತ್ತಿರ ರೈಲ್ವೆ ಹಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸುಮಾರು 25 ವರ್ಷದೊಳಗಿನ ಮೃತದೇಹ ಎಂದು ಗುರುತಿಸಲಾಗಿದ್ದು, ದೇಹದಿಂದ ರುಂಡ ಒಂದು ಕಡೆ ಕಾಲು ಒಂದು ಕಡೆ ಬೇರ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದರಿಂದ, ಯಾರು ಎಂದು ಗುರುತಿಸಲು ಆಗುತ್ತಿಲ್ಲ. ಈ ಸ್ಥಿತಿ ನೋಡಿದರೆ ಇದು ಸಹಜವಾಗಿ ರೈಲಿನಡಿಗೆ ಸಿಲುಕಿ ಮೃತಪಟ್ಟಿದೆಯೇ ಅಥವಾ ಅತ್ಮಹತ್ಯೆಯೇ ಎಂದು ಇನ್ನೂ ತಿಳಿದು ಬಂದಿಲ್ಲ. ಇನ್ನು ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು, ಮತ್ತು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
10/08/2021 12:18 pm