ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣದ ಪೋಸ್ಟ್ ಆಫೀಸ್ ನಲ್ಲಿ‌ ಒಂದು ‌ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ

ಕಲಘಟಗಿ:ಪಟ್ಟಣದ ಪೋಸ್ಟ್ ಆಫೀಸ್ ಕಿಡಿಕಿ ಸಳಿಗಳನ್ನು ಮುರಿದು‌ ಒಂದು ಲಕ್ಷ ಕ್ಕೂ ಹೆಚ್ಚು‌ ಹಣ ಹಾಗೂ ಡಿವಿಆರ್ ಕಳ್ಳತನ ಮಾಡಿರುವ ಘಟನೆ ಮಂಗಳವಾರ ಜರುಗಿದೆ.

ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊ‌ಂದಿಕೊಂಡಿರು ಪೋಸ್ಟ್ ಆಫೀಸ್ ಹಿಂಬದಿಯ ಕಿಡಿಕಿಯ ಕಬ್ಬಿಣದ ಸಳಿಗಳನ್ನು‌ ಮುರಿದು ಕಳ್ಳರು ಒಳಗೆ ನುಗ್ಗಿ ಸಿಸಿ ಕ್ಯಾಮರಾಗಳ ಮೇಲೆ ಬಟ್ಟೆ ಮುಚ್ಚಿ ಸೇಪ್ ಲಾಕರ್ ಒಡೆದು‌ ಅದರಲ್ಲಿ ಇದ್ದ 1,40,382 ರೂಪಾಯಿ ಹಾಗೂ ಸಿ‌ಸಿ ಕ್ಯಾಮರಾ ದ ಡಿವಿಆರ್ ಕಳ್ಳತನ ಮಾಡಿದ್ದಾರೆ.

ಸ್ಥಳಕ್ಕೆ ಸಿಪಿಐ ಪ್ರಭು ಸೂರಿನ ಭೇಟಿ‌ ನೀಡಿ ತನಿಖೆ ನಡೆಸಿದ್ದಾರೆ.ಆರೋಪಿ ಗಳ ಶೋಧ ‌ನಡೆಸಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

16/02/2021 11:16 pm

Cinque Terre

66.28 K

Cinque Terre

2

ಸಂಬಂಧಿತ ಸುದ್ದಿ