ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಮುಂದುವರಿದ ಸರಣಿ ಮನೆಗಳ್ಳತನ

ಧಾರವಾಡ: ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಪ್ರಕರಣ ಮುಂದುವರೆಯುತ್ತಲೇ ಇದೆ.

ನಿನ್ನೆ ತಡರಾತ್ರಿ ಧಾರವಾಡದ ಮದಿಹಾಳ ಹಾಗೂ ಎಂ.ಆರ್.ನಗರದಲ್ಲಿ ಮೂರು ಮನೆಗಳಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮದಿಹಾಳದ ಅಸ್ಲಾಂ ಮುಲ್ಲಾ ಎಂಬುವವರ ಮನೆಗೆ ಕನ್ನ ಹಾಕಿರುವ ಖದೀಮರು ಐದೂವರೆ ಗ್ರಾಂ ತೂಕದ ಎರಡು ನೆಕ್ ಲೆಸ್, ನಾಲ್ಕಾಣೆ ತೂಕದ ಆರು ಚಿನ್ನದ ಉಂಗುರ, ಜುಮಕಿ, ಸಣ್ಣ ಮಕ್ಕಳ ಉಂಗುರ, 20 ಸಾವಿರ ರೂಪಾಯಿ ನಗದು ಸೇರಿದಂತೆ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಎಂ.ಆರ್.ನಗರದ ಗಂಗವ್ವ ಮುದುಕಣ್ಣವರ ಎಂಬುವವರ ಮನೆಗೂ ಕನ್ನ ಹಾಕಿರುವ ಖದೀಮರು ಅಲ್ಲಿಯೂ ನಗದು ಲೂಟಿ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಮೊನ್ನೆಯಷ್ಟೇ ಕಳ್ಳರು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Edited By : Nagaraj Tulugeri
Kshetra Samachara

Kshetra Samachara

13/02/2021 10:52 am

Cinque Terre

75.83 K

Cinque Terre

11

ಸಂಬಂಧಿತ ಸುದ್ದಿ