ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಸಬಾಪೇಟ ಖಾಕಿ ಪಡೆ ಕಾರ್ಯಾಚರಣೆ; ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿ: ಅವಳಿನಗರದ ಜನರಿಗೆ ವಂಚಿಸುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸುವಲ್ಲಿ ಕಸಬಾಪೇಟ ಪೊಲೀಸ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ದರ್ಶನ ಈರಣ್ಣ ಬಿಜವಾಡ ಹಾಗೂ ಸಂದೀಪ ಸುರೇಶ ಬೆಳ್ಳಿಗಟ್ಟಿ ಬಂಧಿತರು. ಆರೋಪಿಗಳಿಂದ 35,500 ಮೌಲ್ಯದ ಒಂದು ಮೊಬೈಲ್ ಪೋನ್, ಬೆಳ್ಳಿ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಸುಲಿಗೆಕೋರರನ್ನು ಪತ್ತೆ ಹಚ್ಚಲು ಡಿಸಿಪಿಗಳಾದ ಕೆ. ರಾಮರಾಜನ್ ಹಾಗೂ ಆರ್.ಬಿ. ಬಸರಗಿ ನಿರ್ದೇಶನದಲ್ಲಿ ಕಸಬಾಪೇಟ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರತನಕುಮಾರ ಜೀರಗಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

12/02/2021 10:26 pm

Cinque Terre

46.79 K

Cinque Terre

0

ಸಂಬಂಧಿತ ಸುದ್ದಿ