ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಕ್ಕಿಬಿದ್ದ ಕಸ ಸಂಗ್ರಹಿಸುವ ವಾಹನದ ಬ್ಯಾಟರಿ ಕಳ್ಳ- ಚಾಲಕನಿಂದಲೇ ಕೃತ್ಯ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣವನ್ನು ಕಸಬಾ ಠಾಣೆ ಪೊಲೀಸರು ಬೇಧಿಸಿದ್ದಾರೆ.

ಪಾಲಿಕೆಯ ವಲಯ ಕಚೇರಿ 11ರಲ್ಲಿ ಬರುವ 9 ಆಟೋ ಟಿಪ್ಪರ್ ಗಾಡಿಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಈ ಕುರಿತು ವಲಯ ಸಹಾಯಕ ಆಯುಕ್ತ ಆನಂದ ಕಾಂಬಳೆ ಅವರು ಕಸಬಾ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ದೂರು ದಾಖಲು ಮಾಡಿಕೊಂಡು ಆರೇಳು ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ಬ್ಯಾಟರಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಕಳ್ಳತನ ಮಾಡಿದ ಆರೋಪಿಯನ್ನು ಬಂಧನ ಮಾಡಿದ ಪೊಲೀಸರಿಗೆ ಶಾಕ್ ಆಗಿದೆ. ಕಸದ ವಾಹನವನ್ನು ಓಡಿಸುವ ಚಾಲಕನೇ ಕಳ್ಳತನ ಮಾಡಿದ್ದಾನೆ. ಪ್ರಭು ಹನಮಂತ ಕ್ಯಾರಕಟ್ಟಿ ಬಂಧಿತನಾಗಿದ್ದಾನೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆ ಮನೆಯ ಕಸ ಸಂಗ್ರಹಣೆ ಮಾಡುವ ವಾಹನಗಳ‌ ಚಾಲನೆ ಮಾಡುತ್ತಿದ್ದ ಹನುಮಂತ. ಕೆಲ ಸಮಸ್ಯೆಯಿಂದ 9 ಆಟೋ ಟಿಪ್ಪರ್‌ಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ.

ವಲಯ ಕಚೇರಿ 11ರ ಕಂಪ್ಯಾಕ್ಟರ್ ಸ್ಟೇಷನ್‌ನಲ್ಲಿ ನಿಲ್ಲಿಸಿದ್ದ 9 ಗಾಡಿಗಳ ಬ್ಯಾಟರಿಗಳನ್ನು ‌ಕಳ್ಳತನ ಮಾಡಿದ್ದ. ಬ್ಯಾಟರಿಗಳನ್ನು ಕಳ್ಳತನ ಮಾಡಿದ ಆರೋಪಿಗೆ ಕಸಬಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರತನಕುಮಾರ್ ಜಿರಗ್ಯಾಳ ನೇತೃತ್ವದಲ್ಲಿ ತಂಡ ಆರೇಳು ಗಂಟೆಗಳಲ್ಲಿ ಬಂಧನ ಮಾಡಿ ಕಳ್ಳತನ ಮಾಡಿದ್ದ ಒಂಬತ್ತು ಬ್ಯಾಟರಿ ಹಾಗೂ ಒಂದು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಒಂದು ಕಾರ್ಯಾಚರಣೆಯಲ್ಲಿ ಕಸಬಾ ಪೊಲೀಸ್ ಠಾಣೆ ಸಿಬ್ಬಂದಿ ಎಎಸ್‌ಐ ಆರ್‌.ವಿ.ಕಮತರ, ಸಿಬ್ಬಂದಿ ಆರ್.ಡಿ.ಪಾಟೀಲ್, ಬಸವರಾಜ ಕುರಿ, ಐ.ಕೆ.ಧಾರವಾಡ, ಮಂಜು ಹೊಸಮನಿ, ರಾಜು ರಾಠೋಡ, ಫಕೀರೇಶ್ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

02/02/2021 08:51 am

Cinque Terre

55.05 K

Cinque Terre

7

ಸಂಬಂಧಿತ ಸುದ್ದಿ