ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹಾವು ಕಚ್ಚಿದ ಪರಿಣಾಮ ರೈತ ಸಾವು

ನವಲಗುಂದ: ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ರೈತನೋರ್ವರು ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಡಿದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ.

ನಿಂಗಪ್ಪ ಬಸಪ್ಪ ಬೆಲ್ಲದ (65) ಮೃತ ದುರ್ದೈವಿ. ನಿಂಗಪ್ಪ ಅವರು ಹೊಲದಲ್ಲಿ ಕೆಲಸ ಮಾಡುವಾಗ ಹಾವಿನ ಮೇಲೆ ಕಾಲಿಟ್ಟಿದ್ದಾರೆ. ಇದರಿಂದ ಹಾವು ಅವರ ಕಾಲಿಗೆ ಕಚ್ಚಿದ್ದು, ಕೂಡಲೇ ಅವರನ್ನು ನವಲಗುಂದದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ನಿಂಗಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Edited By : Vijay Kumar
Kshetra Samachara

Kshetra Samachara

12/01/2021 10:46 pm

Cinque Terre

31.37 K

Cinque Terre

0

ಸಂಬಂಧಿತ ಸುದ್ದಿ