ಧಾರವಾಡ: ಹಣದ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿ ಇರಿದಿರುವ ಘಟನೆ ಧಾರವಾಡದ ಸಪ್ತಾಪುರದ ಬಳಿ ನಡೆದಿದೆ.
ಲಕ್ಷ್ಮೀಸಿಂಗನಕೇರಿಯ ನಿವಾಸಿ ಕಾಂತೇಶ ಲಮಾಣಿ ಎಂಬುವವನೇ ಚೂರಿ ಇರಿತಕ್ಕೆ ಒಳಗಾದವನು. ಕಾಂತೇಶ ತನ್ನ ಇಬ್ಬರು ಸ್ನೇಹಿತರೊಂದಿಗೆ ಹಣದ ವ್ಯವಹಾರ ಇಟ್ಟುಕೊಂಡಿದ್ದ ಈ ಹಿನ್ನೆಲೆಯಲ್ಲಿ ಜಗಳ ಸಂಭವಿಸಿ, ಕಾಂತೇಶನಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ.
ಕಾಂತೇಶನ ಕೈ ಹಾಗೂ ಕುತ್ತಿಗೆಗೆ ಚೂರಿ ಇರಿಯಲಾಗಿದ್ದು, ಸದ್ಯ ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
08/01/2021 09:07 am