ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಬ್ರೇಕಿಂಗ್: ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪಿಡಿಓ, ಪಿಡಿಓ ಪತಿ

ಧಾರವಾಡ: ತನ್ನ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಹೋದ ಪತಿರಾಯನೊಬ್ಬ ಎಸಿಬಿ ಪೊಲೀಸರ ಅತಿಥಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಪುಷ್ಪಾ ಮೇದಾರ ಹಾಗೂ ಇವರ ಪತಿ ಮಹಾಂತೇಶ ಎನ್ನುವವರೇ ಎಸಿಬಿ ಪೊಲೀಸರ ಅತಿಥಿಗಳಾದವರು.

ಪುಷ್ಪಾ ಮೇದಾರ ಅವರ ಬಳಿ ಸಾಗರ ಹೂಗಾರ ಎಂಬುವವರು ಜಮೀನು ಎನ್ ಎ ಮಾಡಿಸುವ ಸಲುವಾಗಿ ಹೋಗಿದ್ದ ಸಂದರ್ಭದಲ್ಲಿ ಪುಷ್ಪಾ ಅವರು 20 ಸಾವಿರ ಹಣದ ಬೇಡಿಕೆ ಇಟ್ಟಿದ್ದರಂತೆ. ಧಾರವಾಡದಲ್ಲಿ ತನ್ನ ಪತಿ ಮಹಾಂತೇಶ ಅವರಿಗೆ ಹಣ ನೀಡುವಂತೆಯೂ ಪುಷ್ಪಾ ಹೇಳಿದ್ದರಂತೆ. ಆ ಪ್ರಕಾರ ಸಾಗರ ಎನ್ನುವವರು ಮೊದಲೇ ಎಸಿಬಿಯವರಿಗೆ ಈ ಮಾಹಿತಿ ನೀಡಿದ್ದರು. ಇಂದು ಪಿಡಿಓ ಪುಷ್ಪಾ ಹಾಗೂ ಅವರ ಪತಿ ಮಹಾಂತೇಶ ಅವರು ಸಾಗರ ಅವರ ಬಳಿ ಹಣ ಪಡೆಯುತ್ತಿರುವಾಗಲೇ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

06/01/2021 06:31 pm

Cinque Terre

126.71 K

Cinque Terre

38

ಸಂಬಂಧಿತ ಸುದ್ದಿ